ಪುತ್ತೂರು: ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ಮುರದಲ್ಲಿ ನಡೆದಿದೆ.

ಚೇತನ್ ಕೆಮ್ಮಿಂಜೆ ಮೃತಪಟ್ಟ ಬೈಕ್ ಸವಾರ. ಪುತ್ತೂರು ದಿ. ನಿವೃತ್ತ ಅರಣ್ಯಾಧಿಕಾರಿ ಪುರುಷೋತ್ತಮ ರವರ ಪುತ್ರನಾಗಿದ್ದು, ಕೆಎಸ್ ಆರ್ ಟಿಸಿ ಮೆಕ್ಯಾನಿಕ್ ಅಶೋಕರವರ ತಮ್ಮ.
ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿನೆ ನಡೆಸಿದ್ದಾರೆ.