ವಿಟ್ಲ : ವಿಟ್ಲ ರೋಟರಿ ಕ್ಲಬ್ ಗೆ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಇವರ ಅಧಿಕೃತ ಬೇಟಿಯ ಸಂದರ್ಭದಲ್ಲಿ ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಟ್ಲ ಕೊಡಂಗೆ ನಿರ್ಗತಿಕ ಮಹಿಳೆ ಎಂಬವರಿಗೆ ಪುಷ್ಪಾ ಇವರಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮನೆಯನ್ನು ಹಸ್ತಾಂತರಿಸಲಾಯಿತು.
ಸುನಂದಾ ಎಂಬವರಿಗೆ 10 ಸಾವಿರ ಧನ ಸಹಾಯ, ಪ್ರತಿಭಾವಂತ ವಿದ್ಯಾರ್ಥಿಗಳಾದ ಸಮೃದ್ಧಿ, ಅಕ್ಷತಾ ಮತ್ತು ಕೌಶಿಕ್ ಎಂಬವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಪಿ ಡಿ ಶ್ರೀನಿವಾಸ್ ಗೌಡ, ಸುನಿಲ್ ಪಾಯಿಸ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ಮತ್ತು ಗ್ರಾ ಪಂ ಉಪಾಧ್ಯಕ್ಷೆ ನಫೀಸ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಖುಷಿ ರೈ ಮತ್ತು ಮೊನಿಷಾ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪ ಗವರ್ನರ್ ಜಯರಾಮ ರೈ, ಝೋನಲ್ ಲೆಫ್ಟಿನೆಂಟ್ ಪಲ್ಲವಿ ಕಾರಂತ್, ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಸಿ ಹೆಚ್, ಕಾರ್ಯದರ್ಶಿ ಸೋಮಶೇಖರ್ ಹೆಚ್, ನಿಯೋಜಿತ ಅಧ್ಯಕ್ಷ ರವಿ ಬಿ ಕೆ, ಪೂರ್ವಾಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ, ಡಾ ಚರಣ್ ಕಜೆ, ಮೋಹನ ಮೈರ, ಪ್ರಕಾಶ್ ನಾಯಕ್, ಸಂಜೀವ ಪೂಜಾರಿ, ಪ್ರವೀಣ್, ಡಾ ವಿ ಕೆ ಹೆಗ್ಡೆ, ಅಣ್ಣಪ್ಪ ಸಾಸ್ತಾನ, ವಸಂತ ಶೆಟ್ಟಿ, ಭಾಸ್ಕರ ಶೆಟ್ಟಿ, ದಿನೇಶ್ ಮಾಡ್ತೇಲು, ದಾಸಪ್ಪ ಪೂಜಾರಿ, ಧನಂಜಯ ಗೌಡ ಮತ್ತಿತರರು ಉಪಸ್ಥಿತರಿದ್ದರು.