ಪುತ್ತೂರು: ನಗರದ ಏಳ್ಮುಡಿಯಲ್ಲಿರುವ ಪ್ರಭು ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ನೀಡುವ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ, ಸಾಂಸ್ಕೃತಿಕ ಯುವ ವೈಭವ ಕಾರ್ಯಕ್ರಮ ಏರ್ಪಡಿಸಿದ್ದು, ಪ್ರೇರಣಾ ಸಂಸ್ಥೆಯನ್ನು 2024-25ನೇ ಸಾಲಿನ ಪ್ರತಿಷ್ಠಿತ ಸ್ವಾಮಿ ವಿವೇಕಾನಂದರ ರಾಜ್ಯ ಸದ್ಭಾವನಾ ಸಾಂಘಿಕ ಪ್ರಶಸ್ತಿಗೆ ರಾಜ್ಯಾಧ್ಯಕ್ಷರು ಅಧ್ಯಕ್ಷತೆಯ ಸಮಿತಿಯ್ಲಿ ಆಯ್ಕೆ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ.5 ಬುಧವಾರ ಸಂಜೆ 3 ಗಂಟೆಗೆ ನಡೆಯಲಿದೆ.
‘ಪ್ರೇರಣಾ’ ಸಂಸ್ಥೆ ಐಎಎಸ್, ಐ ಎಫ್ ಎಸ್, ಐಪಿಎಸ್, ಸಿಎ, ಸಿಎಂಎ, ನೀಟ್, ಕೆಸೆಟ್, ಪ್ಲೆಸ್ ಮೆಂಟ್ ತರಬೇತಿ, ಪ್ಲೆಸ್ ಮೆಂಟ್, ಶಿಕ್ಷಣ ಗೈಡ್ ಲೈನ್ಸ್, ಪಿಯುಸಿ ಕೋಚಿಂಗ್, ಡಿಸ್ಟೆನ್ಸ್ ಶಿಕ್ಷಣ, ಲರ್ನಿಂಗ್ ಓರ್ಟರಿ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್, ಆ್ಯಂಕರಿಂಗ್ ತರಬೇತಿ ನೀಡುತ್ತಿದೆ. ‘ಪ್ರೇರಣಾ’ ಸಂಸ್ಥೆಯಿಂದ ಉನ್ನತ ಶಿಕ್ಷಣದ ಮಾಹಿತಿ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು, ಸರಕಾರಿ ವಸತಿ ನಿಲಯ, ಸರಕಾರಿ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲದ ಕುರಿತು, ಸರಕಾರಿ, ಖಾಸಗಿ ಉದ್ಯೋಗಗಳ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಪ್ರೇರಣಾ ಸಂಸ್ಥೆಯಿಂದ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.