ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಭಾಸ್ಕರ ಎಂ. ಪೆರುವಾಯಿ, ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಆಯ್ಕೆಗೊಂಡಿದ್ದಾರೆ.
ಇತ್ತೀಚೆಗೆ ಸಂಘದ ಎಲ್ಲಾ 11 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಟ್ಟು 11 ಸ್ಥಾನಗಳನ್ನು ಹೊಂದಿರುವ ಸಹಕಾರಿ ಸಂಘದಲ್ಲಿ ಸಾಮಾನ್ಯ ಸ್ನಾನದಿಂದ ಹಾಲಿ ಉಪಾಧ್ಯಕ್ಷ ದಾಮೋದರ ಕುಲಾಲ್, ಹಾಲಿ ನಿರ್ದೇಶಕರಾದ ನಾಗೇಶ್ ಕುಲಾಲ್, ಪದ್ಮ ಕುಮಾರ್ ಎಚ್, ಬಿ.ಎಸ್ ಕುಲಾಲ್, ಸೇಸಪ್ಪ ಕುಲಾಲ್, ಗಣೇಶ್ ಪಿ., ಹಿಂದುಳಿದ ವರ್ಗ ‘ಎ’ ಸ್ನಾನದಿಂದ ಹಾಲಿ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ, ‘ಡಿ’ ವರ್ಗದಿಂದ ಪ್ರಶಾಂತ್ ಬಂಜನ್ ಪುನರಾಯ್ಕೆಯಾಗಿದ್ದರು. ಮಹಿಳಾ ಸ್ಥಾನದಿಂದ ರಂಜಿತ, ರೇಖಾ ದಿನೇಶ್ ಹಾಗೂ ಸಾಮಾನ್ಯ ಸ್ನಾನದಿಂದ ಪೂವಪ್ಪ ಕಡಂಬಾರ್ ನೂತನವಾಗಿ ಆಯ್ಕೆಗೊಂಡಿದ್ದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಎಸ್.ಎಂ ರಘು ಚುನಾವಣಾಧಿಕಾರಿಯಾಗಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಹಾಗೂ ಸಿಬ್ಬಂದಿಗಳು ಸಹಕರಿಸಿದರು.