ಆನಡ್ಕ –ಪುತ್ತೂರು ಬಸ್‍ ಸ್ಥಗಿತ | ವಿದ್ಯಾರ್ಥಿಗಳ ಪರದಾಟ| ನಾಳೆಯೇ ಪ್ರತಿಭಟನೆ ಮಾಡುತ್ತೇವೆ : ಸಾರ್ವಜನಿಕರ ಎಚ್ಚರಿಕೆ

ಪುತ್ತೂರು: ಈ ಪ್ರದೇಶಕ್ಕೆ ಇರುವುದೇ ದಿನದಲ್ಲಿ ಒಂದು ಸರಕಾರಿ ಬಸ್ ಒಡಾಟ. ಅದೂ ಬೆಳಗ್ಗಿನ ಹೊತ್ತು ಮಾತ್ರ. ಆದರೆ ಕೇವಲ ಒಂದೇ ಬಸ್ ಇದ್ದರೂ ಬರುವುದು ಮಾತ್ರ ವಾರಕ್ಕೊಮ್ಮೆ. ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಪರಿಣಾಮ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಈ ಭಾಗಕ್ಕೆ ಬೆಳಗ್ಗೆ 8:00 ಗಂಟೆಗೆ ಬಸ್ ಒಡಾಟ ನಡೆಯುತ್ತಿದೆ. ಈ ಭಾಗದಿಂದ ಸುಮಾರು 80 ರಿಂದ 100 ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಬಸ್ಸಿಲ್ಲದ ಪರಿಣಾಮ ವಿದ್ಯಾರ್ಥಿಗಳು 2-3 ಕಿ.ಮೀ. ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಇಲ್ಲವೆ ಬೇರೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ. ಅದೂ ಪರೀಕ್ಷೆ ದಿನವಾದ್ದರಿಂದ ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ.

ರಾಜ್ಯ ಸರಕಾರದ ಫ್ರೀ ಬಸ್ ಯೋಜನೆಯ ಬಳಿಕ ಬಸ್ಸಿನ ಓಡಾಟದಲ್ಲೂ ಕಡಿತ ಉಂಟಾಗಿದೆ. ಫ್ರೀ ಬಸ್ ಯೋಜನೆ ಇದೆಯೋ ಇಲ್ಲವೋ ಎಂಬಂತಾಗಿದೆ.































 
 

ಈ ಕುರಿತು ಈಗಾಗಲೇ ಪುತ್ತೂರು ಶಾಸಕರ ಗಮನಕ್ಕೆ ತರಲಾಗಿದೆ. ಬಳಿಕ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಬಸ್ಸಿನ ಓಡಾಟ ನಿಂತಿದೆ. ವಿದ್ಯಾರ್ಥಿಗಳು ಮತ್ತೆ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ. ಸರಿಯಾಗಿ ಬಸ್ಸಿನ ವ್ಯವಸ್ಥೆ ಮಾಡದೇ ಇದ್ದಲ್ಲಿ  ಸ್ಥಳೀಯರು ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top