ಮದುವೆ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪತಿ| ಕಮೆಂಟ್ಸ್ ನಲ್ಲಿ ಬಯಲಾಯಿತು ಪತ್ನಿಯ ಕಳ್ಳಾಟ | ಕಮೆಂಟ್‌ ಸಾಕ್ಷಿಯಾಗಿ ದೂರು ದಾಖಲು | ವಿಚಾರಣೆ ವೇಳೆ ಬಿಚ್ಚಿಟ್ಟ ಅಸಲಿ ಸತ್ಯ

ಪುತ್ತೂರು : ಯುವ ಬ್ಯಾಂಕ್ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು, ಪೋಸ್ಟ್ ಮೂಲಕ ಪತ್ನಿಯ ಕಳ್ಳಾಟ ಬಯಲಾಗಿ ಅಚ್ಚರಿಯುಂಟು ಮಾಡಿದೆ.

ಶಿವಚಂದ್ರನ್ ಎಂಬಾತ ಡಾಕ್ಟರ್ ನಿಶಾಂತಿ ಎಂಬಾಕೆಯನ್ನು ಮದುವೆಯಾದ ಸಂಭ್ರಮದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಕಾಮೆಂಟ್ ಬಾಕ್ಸ್  ನಲ್ಲಿ ಬಂದ ಪ್ರತಿಕ್ರಿಯೆ ನೋಡಿ ಆತನಿಗೆ ಶಾಕ್ ಆಗಿದೆ.

ಪುತ್ತೂರಿನ ನೆಪೋಲಿಯನ್ ಎಂಬ ವ್ಯಕ್ತಿ ಫೋಟೋದಲ್ಲಿರುವ ಮಹಿಳೆ ನಿಶಾಂತಿ ಅಲ್ಲ, ನನ್ನ ಹೆಂಡತಿ ಮೀರಾ ಎಂದು ಕಾಮೆಂಟ್ ಮಾಡಿದ್ದರು. 2017 ರಲ್ಲಿ ಮದುವೆಯಾಗಿದ್ದ ಇವರು, ಒಂದು ವರ್ಷದ ನಂತರ ಬೆಲೆಬಾಳುವ ವಸ್ತುಗಳನ್ನು ಕದ್ದು ಈಕೆ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಶಿವಚಂದ್ರನ್ ಈ ಕಮೆಂಟ್ ಓದಿದ ನಂತರ ಕಡಲೂರಿನ ಎನ್.ರಾಜಾ ಎಂಬ ಮತ್ತೊಬ್ಬ ವ್ಯಕ್ತಿ ಕಮೆಂಟ್ ಮಾಡಿ, ಆ ಮಹಿಳೆ ತನ್ನ ಹೆಂಡತಿ ಎಂದು ಹೇಳಿದ್ದಾರೆ.



















































 
 

ಈ ಕಮೆಂಟ್‌ಗಳನ್ನು ಓದಿದ ಶಿವಚಂದ್ರನ್ ತನ್ನ ಹೆಂಡತಿ ಜೊತೆ ಪೊಲೀಸ್ ಠಾಣೆಗೆ ತೆರಳಿ ಸಾಮಾಜಿಕ ಮಾಧ್ಯಮದ ಕಮೆಂಟ್‌ಗಳನ್ನು ಸಾಕ್ಷಿಯಾಗಿ ಪೊಲೀಸರಿಗೆ ನೀಡಿದ್ದಾರೆ. ವಿಚಾರಣೆಯ ವೇಳೆ, ಮಹಿಳೆ ತನ್ನ ನಿಜವಾದ ಹೆಸರು ನಿಶಾಂತಿ ಅಥವಾ ಮೀರಾ ಅಲ್ಲ, ಲಕ್ಷ್ಮೀ ಎಂದು ತಿಳಿಸಿದ್ದಾಳೆ. ಈ ಘಟನೆಯಲ್ಲಿ ಉಲ್ಲೇಖ ಮಾಡಲಾದ ಮೂರು ವ್ಯಕ್ತಿಗಳನ್ನು ಹೊರತುಪಡಿಸಿ ಮತ್ತೊಬ್ಬ ಪತಿ ಇದ್ದಾನೆಂದು ಪೊಲೀಸರಲ್ಲಿ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top