ಪುತ್ತೂರು (ಜ24) : ಪುತ್ತೂರಿನ ಬೊಳುವಾರಿನಲ್ಲಿ ಹಲವು ವರ್ಷಗಳಲ್ಲಿ ಒಂದಷ್ಟು ಪುಟಾಣಿ ಮಕ್ಕಳ ಕಿಲಕಿಲ ನಗು, ಪುಟ್ಟ ಪುಟ್ಟ ಹೆಜ್ಜೆಗಳ ನಾದ, ಜೊತೆಗೆ ಒಂದಷ್ಟು ಅಳುವಿನ ನಿನಾದಗಳು ಸದಾ ಕೇಳಿಬರುತ್ತಿದ್ದವು. ಈ ವರ್ಷ ಒಂದಷ್ಟು ಹೊಸ ಹೊಸ ಚಿಂತನೆ ಯೋಚನೆ ಯೋಜನೆಯ ಜೊತೆ ಈ ಪುಟಾಣಿ ಮಕ್ಕಳ ವಾರ್ಷಿಕೋತ್ಸವವು ಟೌನ್ ಹಾಲ್ ನಲ್ಲಿ ಬಹಳ ಅದ್ದೂರಿಯಾಗಿ ಹಳೆಯ ಸಂಸ್ಕಾರ ಮತ್ತು ಆಧುನಿಕ ಚಿಂತನೆಯ ಜೊತೆ ಬಹಳ ಸುಂದರವಾಗಿ ನಡೆಯಿತು.
ಸಂಸ್ಥೆಯ ಸ್ಥಾಪಕರು ಸಮಾರಂಭದ ಅದ್ಯಕ್ಷರು ಆದ ಶ್ರೀ ಮಹಾಲಿಂಗೇಶ್ವರ ಭಟ್ ದೀಪ ಬೆಳಗಿಸಿ ಮಾತನಾಡಿ, ಸರಳ ಸಭಾ ವೇದಿಕೆಯಲ್ಲಿ ಸಂಸ್ಥೆಯ ಹುಟ್ಟಿಗೆ ಕಾರಣ ಅದು ಬೆಳೆದು ಬಂದ ದಾರಿ, ಮುಂದೆ ಇರುವ ಯೋಜನೆ , ಯೋಚನೆಗಳ ಬಗ್ಗೆ ಮಾತನಾಡುತ್ತಾ ಪ್ರಸ್ತುತ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸತ್ಯಪೂರ್ಣ ಅವರಿಗೆ ಶುಭಾಶಯ ತಿಳಿಸಿದರು.
ರಾತ್ರಿ ಸುಮಾರು 9 ಗಂಟೆಯವರೆಗು ನಡೆದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಪುಟಾಣಿ ಮಕ್ಕಳೆಲ್ಲರೂ ಭಾಗವಹಿಸಿದಲ್ಲದೆ , ಪೋಷಕರು ಸ್ವಇಚ್ಛೆಯಿಂದ ಭಾಗವಹಿಸುವ ಮೂಲಕ ವಾರ್ಷಿಕೋತ್ಸವದ ಮೆರುಗು ಇನ್ನಷ್ಟು ಹೆಚ್ಚಿತು. ಸಾಂಸಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪ್ರಸ್ತುತ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸಂಸ್ಥೆಯ ಮುಖ್ಯಸ್ಥೆ ಸತ್ಯಪೂರ್ಣ, ಸಂಸ್ಥೆ ಹಾಗೂ ಈ ಸಮಾರಂಭದ ಯಶಸ್ಸಿಗೆ ಕಾರಣ ಕರ್ತರಾದ ಎಲ್ಲರನ್ನೂ ಪ್ರತ್ಯೇಕವಾಗಿ ಗುರುತಿಸಿ ಧನ್ಯವಾದಗಳನ್ನು ಹೇಳುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರದ ಜೊತೆ ಸಂಸ್ಥೆಯನ್ನು ಮುನ್ನಡೆಸಲು ಸಹಕರಿಸುವಂತೆ ವಿನಂತಿಸಿದರು..
ವೇದಿಕೆಯಲ್ಲಿ ಆಕಾಶ್ ಕೋಚಿಂಗ್ ಸೆಂಟರ್ ನ ಮಾಲಕಿ ನಾಗಶ್ರೀ ಐತಾಳ್ , ವೈಶಾಲಿ ಭಟ್ ಉಪಸ್ಥಿತರಿದ್ದರು. ಪುಟಾಣಿ ಮಕ್ಕಳಾದ ಆರ್ವಿ, ಜನ್ವಿ, ದುತಿ, ಶಿವನ್ಯ, ಪ್ರಾರ್ಥಿಸಿದರು, ಮಿಹಾನ್ ಸ್ವಾಗತಿಸಿ, ಶಮಂತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಘ, ಧನ್ವಿ ಹಾಗೂ ಹಿಮಾಲಿ ಕಾರ್ಯಕ್ರಮ ನಿರೂಪಿಸಿದರು.