ಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಫೆಬ್ರವರಿ 7ರಂದು ಜರಗಲಿರುವ 5ನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವದ ಅಂಗವಾಗಿ ಗೊನೆ ಮುಹೂರ್ಥ ಮತ್ತು ಚಪ್ಪರ ಮುಹೂರ್ಥ ನಡೆಯಿತು.
ಆಡಳಿತ ಸೇವಾ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಅರ್ಚಕರಾದ ಗುರುಪ್ರಸಾದ ನೂರಿತ್ತಾಯರು ವೈದಿಕ ವಿಧಿ ವಿಧಾನಗಳೊಂದಿಗೆ ಚಪ್ಪರ ಮುಹೂರ್ತ ನೆರವೇರಿಸಿಕೊಟ್ಟರು.
ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ ಆಡಳಿತ ಸೇವಾ ಟ್ರಸ್ಟ್ ನ ಟ್ರಸ್ಟಿಗಳು ಮತ್ತು ಪದಾಧಿಕಾರಿಗಳಾದ ಪ್ರಶಾಂತ್ ಪೈ, ಮನೋಹರ ಶೆಟ್ಟಿ, ನಾರಾಯಣಗೌಡ, ರಾಮಣ್ಣಗೌಡ, ಚೇತನ್ ಅದಮ್ಮ, ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಗೌಡ, ವಿದ್ಯಾ ಪ್ರಭಾಕರ್, ಪ್ರೇಮ ನೂರಿತ್ತಾಯ, ಕೃಷ್ಣಪ್ಪ ಪೂಜಾರಿ, ದಯಾನಂದ ಆಲಡ್ಕ, ಶಿವರಾಮ ನಾಯ್ಕ್ ಉಪಸ್ಥಿತರಿದ್ದರು.