ದಾವಣಗೆರೆಯಲ್ಲಿ ಕಲಾ ನಿರ್ದೇಶಕರಾದ ಕುಮಾರ್ ಪೆರ್ನಾಜೆ  “ಸ್ವರ ಸಿಂಚನ”, ಕಲಾ ತಂಡದ ವಿಶೇಷ ಬರಹಗಾರಕ್ಕೆ ಸೌಮ್ಯ ಪೆರ್ನಾಜೆ, ಸಂಗೀತಕ್ಕೆ ಸವಿತಾ ಕೊಡಂದೂರು  ಅವರಿಗೆ “ಸರಸ್ವತಿ ಸಾಧಕ ಸಿರಿ “ರಾಷ್ಟ್ರ ಪ್ರಶಸ್ತಿಗೆ ಆಯ್ಕೆ.

ಪೆರ್ನಾಜೆ: ದಾವಣಗೆರೆಯ ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ ದಾವಣಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಯ ಸಹಯೋಗದಲ್ಲಿ  70ನೇ ಕನ್ನಡ ನಿತ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ದಾವಣಗೆರೆಯಲ್ಲಿ ಕಲಾ ನಿರ್ದೇಶಕರಾದ ಕುಮಾರ್ ಪೆರ್ನಾಜೆ  “ಸ್ವರ ಸಿಂಚನ”, ಕಲಾ ತಂಡದ ವಿಶೇಷ ಬರಹಗಾರಕ್ಕೆ ಸೌಮ್ಯ ಪೆರ್ನಾಜೆ, ಸಂಗೀತಕ್ಕೆ ಸವಿತಾ ಕೊಡಂದೂರು  ಅವರಿಗೆ “ಸರಸ್ವತಿ ಸಾಧಕ ಸಿರಿ “ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕನ್ನಡ ನಾಡು ನುಡಿ ಕಲೆ ಸಾಹಿತ್ಯ ,ಸಂಗೀತ ,ಸಂಸ್ಕೃತಿ ಹೀಗೆ ಲಲಿತ ಕಲೆಗಳ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆಗೈತೆ ವಿಶಿಷ್ಟ ವಿಶೇಷ ಬರಗಾರ  ಪೆರ್ನಾಜೆ  ಚಿಂತಕ, ಸಂಶೋಧಕ, ಜೇನು ಗಡ್ಡದಾರಿಯಾಗಿರುವ ಕುಮಾರ್ ಪೆರ್ನಾಜೆ ತಮ್ಮ ವಿಶಿಷ್ಟ ಶೈಲಿಯ ಬರಹ ಲೇಖನ ಗಳಿಂದಲೇ ಹೆಸರಾದವರು. ಶಿವಮೊಗ್ಗದಲ್ಲಿನ ಕೃಷಿ ಮೇಳದಲ್ಲಿ ದಕ ಜಿಲ್ಲೆಯ ಉತ್ತಮ ಕೃಷಿಕ ಪ್ರಶಸ್ತಿಯನ್ನು ಗಳಿಸಿದ್ದಾರೆ. ಹವ್ಯಕ ಕೃಷಿ ರತ್ನ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ಕಲಾ ಪೋಷಕ ಕಲಾ ನಿರ್ದೇಶಕ ಶಿಕ್ಷಣ ಪ್ರೇಮಿಯಾಗಿ ಸಾಮಾಜಿಕವಾಗಿ ಗುರುತಿಸಿ ಕೊಂಡಿದ್ದಾರೆ. ಇನ್ನೋರ್ವ ಸೌಮ್ಯ ಪೆರ್ನಾಜೆ ಅವರನ್ನು  ಸಂಗೀತದ ವಿಶೇಷ ಬರಹವನ್ನು ಗುರಿತಿಸಿ “ಸರಸ್ವತಿ ಸಾಧಕ ಸಿರಿ “ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸವಿತಾ ಕೊಡಂದೂರು ಪೆರ್ನಾಜೆಯವರು  ಕೃಷಿ ರತ್ನ, ಗಡಿನಾಡ ಧ್ವನಿ ಮುಂತಾದ ವಿಶೇಷ ಹಾಡುಗಾರಿಕೆಯಲ್ಲಿ ಸಾಧನೆ ತೋರಿದಲ್ಲದೆ ಸೆಕ್ಸೋಫೋನ್ ಜೊತೆ ಸಂಗೀತ ಕಲಾವಿದೆಯಾಗಿದ್ದಾರೆ.

ದಾವಣಗೆರೆ ಚೆನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲ ಕಲ್ಯಾಣ ಮಂಟಪದಲ್ಲಿ ಏ 27ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top