ಪುತ್ತೂರು : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನರಿಮೊಗರು ಇಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆ ಇದರ ಅಂಗವಾಗಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನೆರವೇರಿದ್ದು, ಈ ವೇಳೆ ಜಾಥಾ ನಡೆಯಿತು.
ಪಿ. ಎಸ್. ಐ. ಕುಟ್ಟಿ ಎಂ. ಕೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು. ನರಿಮೊಗರು ರಸ್ತೆಯು ಅಪಾಯಕಾರಿ ಮತ್ತು ಡೆತ್ ಝೋನ್ ಎಂದು ಪರಿವರ್ತನೆಯಾಗದಂತೆ ಹಾಗೂ ಸ್ಪೀಡ್ ಬ್ರೇಕರ ನ್ನು ಹಾಕಿದ್ದು, ನರಿಮೊಗರು ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ಶಾಸಕರು ಸೂಚಿಸಿದ್ದನ್ನು ಪೊಲೀಸ್ ಪಿ ಎಸ್ ಐ ಕುಟ್ಟಿ ಎಂ ಕೆ ಅಭಿನಂದನೆಯನ್ನು ಸಲ್ಲಿಸಿ, ಈ ಕುರಿತಾಗಿ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಂಡೂರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು, ಕಾನ್ಸ್ಟೇಬಲ್ ಹನುಮಂತು ನಿಂಬಲಗುಂದಿ, ಹೋಂಗಾರ್ಡ್ ರವೀಂದ್ರ ಶೆಟ್ಟಿ, ಕಿರಿಯ ತರಬೇತಿ ಅಧಿಕಾರಿ ವಾಣಿ , ಉಷಾ ಎಂ, ಅಜಿತ್, ಗಣೇಶ್, ಶ್ರೀರಕ್ಷಾ, ಹೇಮಲತಾ ಮತ್ತು ನಂದಾದೀಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಯೋಗೀಶ್ P ಶಾಂತಿಗೋಡು ಸ್ವಾಗತಿಸಿ, Ronald Francis walder ವಂದಿಸಿದರು.