ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ರಚನೆಗೆ ಭೂಮಿ ಪೂಜೆ ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ) ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಗ್ರಾಮದ ವಾತ್ಸಲ್ಯ ಸದಸ್ಯರಾದ ಸರಸ್ವತಿಯವರಿಗೆ ಕ್ಷೇತ್ರದಿಂದ ಮಂಜೂರಾದ ವಾತ್ಸಲ್ಯ ಮನೆ ರಚನೆ ಕಾಮಗಾರಿಗೆ ಚಾಲನೆಯನ್ನು ತಾಲೂಕು ಯೋಜನಾಧಿಕಾರಿ ರಮೇಶ್ ನೀಡಿದರು.
ಈ ಸಂದರ್ಭ ವಾತ್ಸಲ್ಯ ಸದಸ್ಯೆ ಸರಸ್ವತಿ, ಅಳಿಕೆ ವಲಯದ ವಲಯಾಧ್ಯಕ್ಷ ರಾಜೇಂದ್ರ ರೈ, ಜನ ಜಾಗೃತಿ ವಲಯಾಧ್ಯಕ್ಷ ಬಾಲಕೃಷ್ಣ ಕಾರಂತ, ಒಕ್ಕೂಟದ ಅಧ್ಯಕ್ಷ ಉದಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರತಿನಿಧಿ ದೀಪಕ್, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರುಗಳು, ವಲಯ ಮೇಲ್ವಿಚಾರಕರು, ತಾಲೂಕು ಸಮನ್ವಯಧಿಕಾರಿ, ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.