ಟೇಕಾಫ್‌ಗೆ ರೆಡಿಯಾಗಿದ್ದ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದ ಪ್ರಯಾಣಿಕ

ಬೆಂಗಳೂರು : ಜೋಧ್‌ಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನ ಟೇಕಾಫ್‌ ಆಗಲು ತಯಾರಾಗುತ್ತಿದ್ದಂತೆ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನ ಬಾಗಿಲು ತೆರೆದ ಘಟನೆ ಇಂದು ಬೆಳಗ್ಗೆ ಸಂಭವಿಸದೆ. ವಿಮಾನ ಇನ್ನೇನು ಟೇಕ್​ ಆಫ್​ ಆಗಬೇಕು ಎನ್ನುವ ಹೊತ್ತಲ್ಲಿ ಪ್ರಯಾಣಿಕ ಎಮರ್ಜೆನ್ಸಿ ಎಕ್ಸಿಟ್ ತೆರೆದಿದ್ದಾರೆ.
ವಿಮಾನ ಬೆಳಗ್ಗೆ 10.10ಕ್ಕೆ ಹೊರಡಬೇಕಿತ್ತು, ಇದ್ದಕ್ಕಿದ್ದಂತೆ ಪ್ರಯಾಣಿಕರೊಬ್ಬರು ಫ್ಲಾಪ್ ಎಳೆದು ತುರ್ತು ನಿರ್ಗಮನ ದ್ವಾರವನ್ನು ತೆರೆದರು. ವಿಮಾನದಲ್ಲಿ ಗೊಂದಲ, ಭಯ ಸೃಷ್ಟಿಯಾಗಿದ್ದು, ಪ್ರಯಾಣಿಕನನ್ನು ಬಂಧಿಸಿ ಸಿಐಎಸ್‌ಎಫ್‌ಗೆ ಒಪ್ಪಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ ಉದ್ಯೋಗಿಯಾಗಿರುವ ಸಿರಾಜ್ ಕಿದ್ವಾಯಿ ತಪ್ಪಾಗಿ ಫ್ಲಾಪ್ ಎಳೆದಿದ್ದಾರೆ ಅವರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

ತುರ್ತು ನಿರ್ಗಮನ ಗೇಟ್ ತೆರೆದಾಗ ಪೈಲಟ್‌ಗೆ ನೇರ ಸಂದೇಶ ಹೋಗಿದೆ. ಭದ್ರತಾ ಅಧಿಕಾರಿಗಳು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದರು. ಜೋಧ್‌ಪುರ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಪ್ರಯಾಣಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಟೇಕ್ ಆಫ್ ಆಗಲು 20 ನಿಮಿಷಗಳ ಕಾಲ ವಿಳಂಬವಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top