ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನಲ್ಲಿತ್ತು ಕಂತೆ ಕಂತೆ ನೋಟು

ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋದ ಕಾರಿನ ನಂಬರ್‌ ಪ್ಲೇಟ್‌ ನಕಲಿ

ಕಾರವಾರ: ಅಂಕೋಲಾ ಸಮೀಪ ರಾಮನಗುಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋಗಿದ್ದ ಕ್ರೆಟಾ ಕಾರಿನೊಳಗೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಕಾರನ್ನು ಪೊಲೀಸ್‌ ಠಾಣೆಗೆ ಒಯ್ದಿದ್ದಾರೆ. ಕಾರು ಮಂಗಳೂರು ಮೂಲದ್ದು ಎಂಬ ಸಂಶಯ ವ್ಯಕ್ತವಾಗಿದೆ.
ಕಾರಿನ ನಂಬರ್‌ ಪ್ಲೇಟ್‌ ನಕಲಿಯಾಗಿದ್ದು, ಹೀಗಾಗಿ ಈ ಕಾರು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾರಿನೊಳಗಿದ್ದ ಬ್ಯಾಗಿನಲ್ಲಿ 1,14,99,500 ರೂಪಾಯಿ ಪತ್ತೆಯಾಗಿದೆ.
ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಕ್ರೇಟಾ ಕಾರೊಂದನ್ನು ನಿಲ್ಲಿಸಿ ಹೋಗಿದ್ದರು. ಪರಿಶೀಲನೆ ನಡೆಸಿದಾಗ ಕಾರೊಳಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ. ಕಾರಿನ ನಂಬರ್‌ ಪ್ಲೇಟ್ ಮಡಿಕೇರಿ ಮೂಲದ ಅಲ್ಟ್ರೋಜ್‌ ಕಾರಿನದ್ದು ಎಂದು ತನಿಖೆಯಿಂದ ತಿಳಿದು ಬಂದಿದೆ. ಕ್ರೆಟಾ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಅದರಲ್ಲಿ ಲಕ್ಷಗಟ್ಟಲೆ ಹಣ ಇಟ್ಟು ಹೋದವರ್ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕಾರಿನ ಬೋನಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ, ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top