ಮಂಗಳೂರು: ಸ್ಕೂಟರ್ ಬಿಡಿಸಲು ಲಂಚ ಕೇಳಿದ ಆರೋಪದ ಮೇಲೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಠಾಣಾಧಿಕಾರಿಯೊಬ್ಬರ ವಿರುದ್ಧ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗವು ಪ್ರಕರಣ ದಾಖಲಿಸಿದೆ. ದೂರುದಾರರು ಪೊಲೀಸರು ವಶಪಡಿಸಿಕೊಂಡಿದ್ದ ಸ್ಕೂಟರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಆ ಪ್ರಕಾರ್ ದೂರುದಾರ ಸ್ಕೂಟರನ್ನು ಬಿಡುಗಡೆ ಮಾಡಲು ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಷರೀಫ್ ಅವರನ್ನು ಸಂಪರ್ಕಿಸಿದ್ದರು. ಷರೀಫ್ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ದೂರುದಾರ ಸ್ವಲ್ಪ ಕಡಿಮೆ ಮಾಡಲು ಹೇಳಿದಾಗಷರೀಫ್ ಸ್ಟೇಷನ್ ರೈಟರ್ ನಾಗರತ್ನ ಅವರನ್ನು ಭೇಟಿಯಾಗುವಂತೆ ಸೂಚಿಸಿದ್ದರು.
ಲಂಚದ ಮೊತ್ತವನ್ನು 3000 ರೂ.ಗೆ ಇಳಿಸಲಾಗಿತ್ತು. ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣಿಗೆ ದೂರು ನೀಡಲಾಗಿತ್ತು.
ಜನವರಿ 27ರಂದು ಲೋಕಾಯುಕ್ತ ಅಧಿಕಾರಿಗಳು 3,000 ರೂ. ಸ್ವೀಕರಿಸುತ್ತಿದ್ದಾಗ ಇನ್ಸ್‌ಪೆಕ್ಟರ್ ಮಹಮ್ಮದ್ ಷರೀಫ್ ಮತ್ತು ಕಾನ್‌ಸ್ಟೆಬಲ್ ಪ್ರವೀಣ್ ನಾಯ್ಕ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.