ಆಡಳಿತ ಮಂಡಳಿ, ನೌಕರಿಯಲ್ಲಿ ಮೀಸಲಾತಿ ಕೋರಿಕೆ
ಮಂಗಳೂರು : ಸಹಕಾರ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಬೇಡಿಕೆಯಿರುವ ಮನವಿ ಪತ್ರವನ್ನು ಸಮುದಾಯದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖಾಂತರ ಮುಖ್ಯ ಮಂತ್ರಿಗೆ ಹಾಗೂ ಸಹಕಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೋ-ಆಪರೇಟಿವ್ ಸೊಸೈಟಿಗಳ ಆಡಳಿತ ಮಂಡಳಿಯಲ್ಲಿ ವಿಶ್ವಕರ್ಮ ಸಮುದಾಯದವರಿಗೆ ಒಂದು ಸ್ಥಾನ ಮೀಸಲು (ಚುನಾಯಿತ ಅಥವಾ ನಾಮನಿರ್ದೇಶಿತ ಸ್ಥಾನ) ಮತ್ತು ಸಹಕಾರ ಕ್ಷೇತ್ರದ ಉದ್ಯೋಗದಲ್ಲಿ ಶೇ.5 ಒಳ ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಕೆಪಿಸಿಸಿ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯ ಜಿ ಆಚಾರ್ಯ, ಯೂತ್ ಕಾಂಗ್ರೆಸ್ ಕಾರ್ಕಳ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ, ಪಂಚಾಯತ್ ಸದಸ್ಯ ಪ್ರಭಾಕರ್ ಆಚಾರ್ಯ ಕಟಪಾಡಿ, ಉಪೇಂದ್ರ ಆಚಾರ್ಯ ಪೆರ್ಡೂರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ ಮೂಡುಬಿದಿರೆ, ಸೇವಾದಳ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಅಶೋಕ್ ಆಚಾರ್ಯ ಸಿದ್ದಕಟ್ಟೆ, ಮಹಿಳಾ ಕಾಂಗ್ರೆಸ್ ಸುರತ್ಕಲ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅರ್ಚನಾ ಆಚಾರ್ಯ, ಪಿ.ಆರ್ ಗೋಪಾಲಕೃಷ್ಣ ಆಚಾರ್ಯ, ಹರೀಶ್ ಆಚಾರ್ಯ ಮಂಗಳೂರು, ವಸಂತ್ ಆಚಾರ್ಯ ಮಂಜನಾಡಿ, ವಿವೇಕ್ ಆಚಾರ್ಯ ಕೃಷ್ಣಾಪುರ, ಶೋಭಾ ಆಚಾರ್ಯ ಪುತ್ತೂರು ಇದ್ದರು.