ಕಾಸರಗೋಡಿನಿಂದ ಶಿರೂರು ತನಕ ಕಡಲ ಕಿನಾರೆಯಲ್ಲಿ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ

ಸನಾತನ ಧರ್ಮ ರಕ್ಷಣೆ, ಪ್ರಕೃತಿ ವಿಕೋಪ ತಡೆಗೆ ದೇವರಿಗೆ ಮೊರೆ

ಉಡುಪಿ: ಸನಾತನ ಧರ್ಮದ ರಕ್ಷಣೆ, ಕಡಲ್ಕೊರೆತದಂಥ ಪ್ರಕೃತಿ ವಿಕೋಪಗಳು ನಡೆಯದಿರಲು ಭಾನುವಾರ ಕೇರಳದ ಕಾಸರಗೋಡಿನಿಂದ ಬೈಂದೂರು ಸಮೀಪದ ಶಿರೂರು ತನಕ ಕಡಲ ಕಿನಾರೆಯಲ್ಲಿ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಪಠಣ ಅಭಿಯಾನ ಮಾಡಲಾಯಿತು.

ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಕೆಲವೆಡೆಗಳಲ್ಲೂ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಿಸಲಾಗಿದೆ. ಅರಬ್ಬಿ ಸಮುದ್ರದ 108 ಸ್ಥಳಗಳಲ್ಲಿ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗಿದೆ. 20 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದಾರೆ. ಸಮುದ್ರಕ್ಕೆ ಕ್ಷೀರಾರ್ಪಣೆ ಮಾಡಿದ ಬಳಿಕ ಏಕಕಾಲದಲ್ಲಿ ಪಠಣ ಮಾಡಲಾಯಿತು. ಸಂಜೆ 4 ರಿಂದ 6ರವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗಿದೆ.































 
 

20 ವರ್ಷದ ಹಿಂದೆಯೂ ನಡೆದಿತ್ತು ಪಾರಾಯಣ

2005ರಲ್ಲಿ ಇದೇ ರೀತಿಯಲ್ಲಿ ಕಡಲ್ಕೊರೆತ ತಡೆಯುವ ಉದ್ದೇಶದಿಂದ ಕಡಲ ಕಿನಾರೆಗಳಲ್ಲಿ ವಿಷ್ಣು ಸಹಸ್ರ ನಾಮ ಪಠಣ ಮಾಡಲಾಗಿತ್ತು. ನಿನ್ನೆಯದ್ದು ಈ ಅಭಿಯಾನದ ಮುಂದುವರಿಕೆ ಎಂದು ಸಂಘಟಕರಾದ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿಯವರು ಮಾಹಿತಿ ನೀಡಿದ್ದಾರೆ. 2005ರಲ್ಲಿ ವಿಷ್ಣು ಸಹಸ್ರ ನಾಮ ಪಠಣ ಮಾಡಿದ ಬಳಿಕ ಕೆಲ ವರ್ಷ ಕಡಲ್ಕೊರೆತದಂಥ ಪ್ರಕೃತಿ ವಿಕೋಪಗಳು ಕಡಿಮೆಯಾಗಿದ್ದವು ಎಂದು ಅವರು ತಿಳಿಸಿದ್ದಾರೆ. ಈಗ ಮತ್ತೆ ಪ್ರಕೃತಿಯಲ್ಲಿ ಏರುಪೇರು ಕಾಣಿಸುತ್ತಿದೆ ಹೀಗಾಗಿ ವಿಷ್ಣುವಿನ ಮೊರೆಹೋಗುವುದು ಅನಿವಾರ್ಯವಿದೆ. ಸನಾತನ ಧರ್ಮ ಉಳಿಯಬೇಕು, ಭಾರತ ವಿಶ್ವಗುರವಾಗಿ ಮೆರೆಯಬೇಕು, ಪ್ರಕೃತಿ ವಿಕೋಪಗಳು ಉಂಟಾಗಾಬಾರದು, ಸಮುದ್ರದಿಂದ ಯಾವುದೇ ಅಪತ್ತು ಎದುರಾಗಬಾರದು, ಕಡಲ್ಕೊರೆತ ಸಂಭವಿಸಬಾರದು ಎಂಬ ಸಂಕಲ್ಪದೊಂದಿಗೆ ಪಠಣ ಕೈಗೊಳಲಾಯಿತು. ಸಮುದ್ರರಾಜನಿಗೆ ಹಾಲೆರೆಯುವ ಮೂಲಕ ಸಂಕಲ್ಪ ಕೈಗೊಂಡು ಸತತವಾಗಿ ಎರಡು ಗಂಟೆಗಳ ಕಾಲ‌ ಮಂತ್ರ ಪಠಣ ನಡೆಯಿತು.
ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ವಿಷ್ಣು ಸಹಸ್ರನಾಮ ಪಠಣ ನಡೆದಿದೆ. ಏಕಕಾಲದಲ್ಲಿ 108 ಸ್ಥಳಗಳಲ್ಲಿ ಮಂತ್ರ ಪಠಣ ಮಲ್ಪೆ ಬೀಚ್, ಪಡುಕೆರೆ ಬೀಚ್ ಸೇರಿದಂತೆ ಉಡುಪಿ 50 ಕಡೆ ನೂರಾರು ಮಂದಿ ಸೇರಿ 4 ರಿಂದ 6 ಗಂಟೆಯವರೆಗೆ ವಿಷ್ಣು ಸಹಸ್ರ ನಾಮ ಮಂತ್ರ ಪಠಿಸಿದರು.ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ವಿಷ್ಣು ಸಹಸ್ರನಾಮ ಪಠಣ ನಡೆದಿದೆ. ಎಲ್ಲ ಗುಂಪುಗಳು ಆರು ಬಾರಿ ವಿಷ್ಣು ಸಹಸ್ರನಾಮ ಪಠಿಸಿವೆ. ಮಹಿಳೆಯರು, ಪುರುಷರು ಸೇರಿದಂತೆ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ‌ವೇದ ಪಾರಂಗತ ಕೆ.ಎಸ್ ನಿತ್ಯಾನಂದ ಮಾರ್ಗದರ್ಶನದಲ್ಲಿ ಮೂರನೇ ಬಾರಿಗೆ ಅಭಿಯಾನ ಕರಾವಳಿಯಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top