ಸೈಫ್‌ ಹಲ್ಲೆ ಪ್ರಕರಣ : ಆರೋಪಿಯ ಗುರುತು ದೃಢಪಡಿಸಲು ವೈಜ್ಞಾನಿಕ ಪರೀಕ್ಷೆ

ಎಲ್ಲ ತಂದೆಯಂದಿರೂ ಮಗ ಅಪರಾಧಿಯಲ್ಲ ಎಂದೇ ವಾದಿಸುತ್ತಾರೆ, ತಂದೆಯ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ

ಮುಂಬಯಿ: ನಟ ಸೈಫ್‌ ಅಲಿ ಖಾನ್‌ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು ತನ್ನ ಮಗನಲ್ಲ ಎಂದಿರುವ ಆರೋಪಿ ಮೊಹಮ್ಮದ್‌ ಶೆರಿಫುಲ್ಲ ಷೆಹಜಾದ್‌ನ ತಂದೆಯ ಹೇಳಿಕೆಯನ್ನು ಮುಂಬಯಿ ಪೊಲೀಸರು ಅಲ್ಲಗಳೆದಿದ್ದಾರೆ. ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರನಾಗಿದ್ದು, ಸೈಫ್‌ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚು ಮಾದರಿಗಳು ಅವನ ಬೆರಳಚ್ಚಿಗೆ ಹೋಲಿಕೆಯಾಗುತ್ತಿವೆ. ಎಲ್ಲ ತಂದೆಯಂದಿರೂ ತಮ್ಮ ಮಗ ಅಪರಾಧಿಯಲ್ಲ ಎಂದೇ ವಾದಿಸುತ್ತಾರೆ. ಹೀಗಾಗಿ ಆರೋಪಿಯ ತಂದೆಯ ಮಾತಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಪೊಲೀಸರು ನಾಲ್ಕು ದಿನ ಹಗಲು ರಾತ್ರಿ ನಿದ್ದೆಗೆಟ್ಟು ಆರೋಪಿಯನ್ನು ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಸೈಫ್‌ ಘಟನೆ ನಡೆದ ದಿನ ಧರಿಸಿದ್ದ ಬಟ್ಟೆ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಆರೋಪಿ ಜೊತೆ ಸೈಫ್‌ ಸಾಕಷ್ಟು ಹೋರಾಟ ಮಾಡಿದ್ದಾರೆ. ಬಟ್ಟೆಯಲ್ಲಿ ಅವನ ಬೆರಳಚ್ಚು ಇರುವ ಸಾಧ್ಯತೆಯಿದೆ. ಇದು ಆತನೇ ಆರೋಪಿ ಎನ್ನುವುದನ್ನು ದೃಢಪಡಿಸಲಿದೆ. ಆರೋಪಿ ಧರಿಸಿದ ಬಟ್ಟೆಯ ಮೇಲೂ ರಕ್ತದ ಕಲೆಯಿತ್ತು. ನಟನ ಮತ್ತು ಆರೋಪಿ ಬಟ್ಟೆ ಮೇಲಿರುವ ಕಲೆಯನ್ನು ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಿದರೆ ಹೆಚ್ಚಿನ ಸಾಕ್ಷ್ಯ ಲಭಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನದ ಮೂಲಕ ಆರೋಪಿಯ ಗುರುತು ಪತ್ತೆ ಹಚ್ಚಲಾಗುವುದು. ಇದರಿಂದ ಸಿಸಿಟಿವಿಯಲ್ಲಿ ಕಂಡ ವ್ಯಕ್ತಿಯ ಮುಖಕ್ಕೂ ತನ್ನ ಮಗನ ಮುಖಕ್ಕೂ ಹೋಲಿಕೆಯಿಲ್ಲ ಎಂದಿರುವ ತಂದೆಯ ವಾದವನ್ನು ಸುಳ್ಳು ಎಂದು ಸಾಬೀತುಪಡಿಸಲು ಸಾಧ್ಯವಾಗುತ್ತದೆ ಎಂದು ಶನಿವಾರ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಆರೋಪಿಯ ತಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತನ್ನ ಮಗ ಅಕ್ರಮವಾಗಿ ನುಸುಳಿಹೋಗಿರುವುದು ನಿಜ, ಆದರ ಆತ ಸೈಫ್‌ಗೆ ಇರಿದ ಆರೋಪಿಯಲ್ಲ. ಆತ ಹಾಗೇ ಮಾಡುವವನೂ ಅಲ್ಲ, ನಮ್ಮ ಪರಿವಾರ ಬಾಂಗ್ಲಾದೇಶದ ರಾಜಕೀಯದಲ್ಲಿ ಸಕ್ರಿಯವಾಗಿದೆ. ರಾಜಕೀಯ ಕಾರಣಗಳಿಗಾಗಿ ಆತ ದೇಶ ಬಿಡಬೇಕಾಗಿ ಬಂತು. ಮುಂಬಯಿ ಪೊಲೀಸರು ಆತನನ್ನು ಹಿಡಿದು ಸೈಫ್‌ ಪ್ರಕರಣಕ್ಕೆ ಫಿಕ್ಸ್‌ ಮಾಡಿದ್ದಾರೆ ಎಂದು ಹೇಳಿದ್ದರು. ನನ್ನ ಮಗನ ತಲೆಕೂದಲು ಉದ್ದವಿತ್ತು, ಆರೋಪಿಯ ಕೂದಲು ಚಿಕ್ಕದಿದೆ ಎಂದು ಹೇಳಿದ್ದರು. ಇದು ಭಾರದಲ್ಲಿ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲದೆ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಗುರುತು ಖಚಿತಪಡಿಸಿಕೊಳ್ಳುವ ಸಲುವಾಗಿ ವೈಜ್ಞಾನಿಕ ಪರೀಕ್ಷೆಗಳ ಮೊರೆ ಹೋಗಿದ್ದಾರೆ. ಸೈಫ್‌ ಮೇಲಿನ ಹಲ್ಲೆ ಕೇಸ್‌ ಹೈ ಪ್ರೊಫೈಲ್‌ ಪ್ರಕರಣವಾಗಿರುವುದರಿಂದ ಸಣ್ಣಪುಟ್ಟ ವಿಚಾರಗಳಿಗೆಲ್ಲ ಮಾಧ್ಯಮಗಳು ವಿನಾಕಾರಣ ಪ್ರಚಾರ ನೀಡುತ್ತಿವೆ. ಇದರಿಂದ ಪ್ರಕರಣದ ತನಕೀಗೆಗ ತೊಡಕಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿ ಕೃತ್ಯ ಎಸಗಿದ ಬಳ:ಿಕ ಸಲೂನ್‌ಗೆ ಹೋಗಿ ಕೂದಲು ಟ್ರಿಮ್‌ ಮಾಡಿಸಿಕೊಂಡಿದ್ದಾನೆ. ಸಲೂನ್‌ನವನನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಇದನ್ನು ದೃಢಪಟಿಸಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top