ಮಾಣಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಟ್ಲ ತಾಲೂಕು ಮಾಣಿ ವಲಯದ ಕರ್ನಾಟಕ ಪ್ರೌಢ ಶಾಲೆಗೆ ಸಮುದಾಯದ ಅಭಿವೃದ್ಧಿ ಜ್ಞಾನ ದೀಪ ಕಾರ್ಯಕ್ರಮದಡಿ. ಮಂಜೂರಾದ ಬೆಂಚು, ಡೆಸ್ಕ್ ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಯೋಜನಾಧಿಕಾರಿ ರಮೇಶ್ ಬೆಂಚು, ಡೆಸ್ಕ್ ನ್ನು ವಿತರಿಸಿ ಮಾತನಾಡಿ, ಶಿಕ್ಷಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಗಳ ಬಗ್ಗೆ ಮಾಹಿತಿ ತಿಳಿಸಿ, ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕ ಹಾಜಿ ಇಬ್ರಾಹಿಂ ಕೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮಾಣಿ, ಶಾಲಾ ಮುಖ್ಯ ಶಿಕ್ಷಕ ಚೆನ್ನಪ್ಪ ಗೌಡ, ಸಹ ಶಿಕ್ಷಕಿ ಸಾರಿಕಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ, ಸೇವಾ ಪ್ರತಿನಿಧಿ ಲಾಯ್ಲಾಬಿ ಉಪಸ್ಥಿತರಿದ್ದರು.