ಪುತ್ತೂರು : ಕೃಷ್ಣಪ್ಪ ಗೌಡ ಮಾಲಿಕತ್ವದ ಪುತ್ತೂರಿನ ನೆಹರು ನಗರದಲ್ಲಿರುವ ಹೋಟೆಲ್ ಶ್ರೀಕೃಷ್ಣ ಭವನವು ಸುಮಾರು 20 ವರುಷಗಳಿಂದಲೂ ಅಧಿಕ ಸಮಯದಿಂದ ನೆಹರು ನಗರದಲ್ಲಿನ ಪುತ್ತೂರು- ಮಂಗಳೂರು ಹೆದ್ದಾರಿ ರಸ್ತೆ ಬದಿಯ ಅಶ್ವಿನಿ ಕಾಂಪ್ಲೆಕ್ಸ್’ನಲ್ಲಿ ಕಾರ್ಯಾಚರಿಸುತ್ತಿದ್ದು, ಇದೀಗ ಹೋಟೆಲ್ ಶ್ರೀಕೃಷ್ಣ ಭವನ ಪಟ್ಲ ಕಾಂಪ್ಲೆಕ್ಸ್’ಗೆ ಜ. 24ರಂದು ಸ್ಥಳಾoತರಗೊಂಡಿದೆ.
ಈ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಹೋಟೆಲ್ ಶ್ರೀ ಕೃಷ್ಣ ಭವನ ಪಟ್ಲ ಕಾಂಪ್ಲೆಕ್ಸ್’ ನ ನೂತನ ಕಟ್ಟಡ ಶುಭಾರಂಭಗೊಂಡಿದೆ. ನೂತನ ಹೋಟೆಲನ್ನು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.
ಹೋಟೆಲ್ ಶ್ರೀಕೃಷ್ಣ ಭವನ ಉದ್ಘಾಟಣೆ ಶುಭಾರಂಭದಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, 41 ವರ್ಷದಿಂದ ಹೋಟೆಲ್ ಸೇವೆಯನ್ನು ನೀಡಿದ ಯಶಸ್ವಿ ಉದ್ಯಮಿ ಕೃಷ್ಣಪ್ಪ ಗೌಡ ಎಂದು ಶುಭ ಹಾರೈಸಿದರು.
ಶುಭಾರಂಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಒಕ್ಕಲಿಗ ಗೌಡ ಸೇವಾ ಸಂಘ ಕಡಬದ ಅಧ್ಯಕ್ಷ ಸುರೇಶ್ ಭೈಲು, ನ್ಯೂಸ್ ಪುತ್ತೂರಿನ ಕಾರ್ಯ ನಿರ್ವಾಹಕ, ನಿರ್ದೇಶಕ ನಾಗೇಶ್ ಕೆಡೆಂಜಿ, ಸೀತರಾಮ ಕೇವಳ, ವಸಂತ ವೀರ ಮಂಗಲ, ಪ್ರವೀಣ್ ಕುಂಟ್ಯಾನ, ಶ್ರೀಧರ್ ಪಟ್ಲ, ವಿಜಯ್ ಪಟ್ಲ, ಸುರೇಶ್ ಬೈಲು ,. ಚಿದಾನಂದ ಬೈಲಾಡಿ, ಲಿಂಗಪ್ಪ ಗೌಡ ತೆಂಕಿಲ, ರಾಘವೇಂದ್ರ ಪ್ರಭು, ಯತೀಶ್ ಎನ್, ಯೋಗಿಶ್ ಪುಜಾರಿ, ಶ್ರೀಧರ್ ಗೌಡ ಕೆಲಿಂಜ, ಜೀವಂದರ್ ಜೈನ್, ಹೋಟೆಲ್ ಮಾಲಕರಾದ ಕೃಷ್ಣಪ್ಪ ಗೌಡ ಮತ್ತು ಲಲಿತಾ, ಮನೆಯವರಾದ ಮುರಳಿಧರ, ಮಧು ಮುರಳಿಧರ ಕೆ.ಎಲ್. ಕಾವ್ಯ ಅರುಣೋದಯ ಕೆ.ಎಲ್. , ದಿವ್ಯ ನಿರಂಜನ ಕೆ.ಎಲ್., ಮತ್ತು ಸಿಬ್ಬಂದಿ ವರ್ಗ, ಹಲವಾರು ಗಣ್ಯರು ಉಪಸ್ಥಿತರಿದ್ದರು.