ಸುಳ್ಯ : ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿ ಮಜಲಿನಿಂದ ನಾಪತ್ತೆಯಾಗಿದ್ದ ಅನ್ವಿತ್ ಎನ್ನುವ ಬಾಲಕ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಈತ ಅಜ್ಜಾವರದ ಭಜನಾ ಮಂದಿರದಲ್ಲಿ ಜ.23ರ ಗುರುವಾರ ಮುಂಜಾನೆ ಪತ್ತೆಯಾಗಿದ್ದಾನೆ. ಅಡಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ವಿತ್ ಜ.22ರ ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಅನ್ವಿತ್ ಮೂಲತ ಪುತ್ತೂರು ತಾಲೂಕಿನ ಈಶ್ವರಮಂಗಳ ನಿವಾಸಿಯಾಗಿದ್ದು, ತನ್ನ ಅಜ್ಜಿ ಮನೆಯಾದ ಶಾಂತಿಮೂಲೆಯಿಂದ ಶಾಲೆಗೆ ಹೋಗುತ್ತಿದ್ದಾನೆ. ಬಾಲಕ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.