ಪುತ್ತೂರು: ಎವಿಜಿ ಅಸೋಸಿಯೇಷನ್ ನ ಬೆಳ್ಳಿ ಹಬ್ಬದ ಪ್ರಯುಕ್ತ ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 19 ಆದಿತ್ಯವಾರದಂದು ತಾಲೂಕು ಮಟ್ಟದ ಚಿತ್ರೋತ್ಸವ ಸ್ಪರ್ಧೆಯು ನಡೆಯಿತು. ಸಮಾರೋಪ ಸಮಾರಂಭದ ಮೊದಲಿಗೆ ಒಂದು ಗಂಟೆಯ ಕಾಲಾವಧಿಯೊಂದಿಗೆ ವಿವಿಧ ಶಾಲೆಗಳಿಂದ ಪಾಲ್ಗೊಂಡಂತಹ ವಿದ್ಯಾರ್ಥಿ, ವಿದ್ಯಾರ್ಥಿನಿಯರ 5 ವಿಭಾಗಗಳ ಚಿತ್ರರಚನಾ ಸ್ಪರ್ಧೆಯು ನಡೆಯಿತು. ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕದಿಂದ 10 ನೇ ತರಗತಿವರೆಗಿನ 175 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಶಾಲೆಗಳಿಂದ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಬಾಲಾಜಿ ಪೈಂಟ್ ನ ಮಾಲಕರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆ ರವರು ವಹಿಸಿದ್ದು, ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮನ್ನಿತ್ ನೀರ್ಪಾಜೆ ( ರಿದಮಿಕ್ ಯೋಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು) ರವರು ದೀಪ ಬೆಳಗುವುದರ ಮೂಲಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕುಮಾರಿ ನಿಖಿತಾ ಪಾಣಾಜೆ (ವ್ಯವಸ್ಥಾಪಕ ನಿರ್ದೇಶಕರು ಐಕ್ಯಂ ಅಕಾಡೆಮಿ ಪುತ್ತೂರು) ಶ್ರೀ ಕೆ ದಿನೇಶ್ ವಿಶ್ವಕರ್ಮ( ಚಿತ್ರಕಲಾ ಅಧ್ಯಾಪಕರು) ರವರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಅಸೋಸಿಯೇಷನ್ ನ ಮಾಲಕರಾದ ಶ್ರೀ ಎ.ವಿ.ನಾರಾಯಣ, ಶಾಲಾ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪಗೌಡ ಬಲ್ಯರವರು ಹಾಗೂ ಶಾಲಾ ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಳುವೇಲು ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ ಕೆ. ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಷಕ ವೃಂದದವರು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು. ತಾಲೂಕು ಮಟ್ಟದ ಚಿತ್ರೋತ್ಸವದಲ್ಲಿ ಪ್ರತಿ ವಿಭಾಗದಲ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಸಮಾಧಾನಕರ ಬಹುಮಾನವನ್ನು ಹಾಗೂ ಭಾಗವಹಿಸಿದವರಿಗೆ ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಶಿಕ್ಷಕಿ ಹರ್ಷಿತ ಪ್ರಾರ್ಥಿಸಿ , ಶಾಲಾ ನಿರ್ದೇಶಕಿ ಪ್ರತಿಭಾ ದೇವಿಯವರು ವಂದನಾರ್ಪಣೆಗೈದು, ಚಿತ್ರೋತ್ಸವದ ಸಂಯೋಜಕಿ ಸೌಮ್ಯ ಶ್ರೀ ಹೆಗಡೆ ರವರು ಕಾರ್ಯಕ್ರಮ ನಿರೂಪಿಸಿದರು.