ಬೆಂಗಳೂರು : ಪತ್ನಿ ಮನೆಗೆ ಹೋಗಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಭಾವಿಯ ಎನ್ಜಿಎಫ್ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಮಂಜುನಾಥ್ (39) ಆತ್ಮಹತ್ಯೆ ಮಾಡಿಕೊಂಡ ಪತಿ ಎನ್ನಲಾಗಿದೆ.
ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿದ್ದಾರೆ. ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್ಜಿಎಫ್ ಲೇಔಟ್ನಲ್ಲಿರುವ ಹೆಂಡತಿ ವಾಸವಿದ್ದ ಮನೆಗೆ 8 ಗಂಟೆಗೆ ಮಂಜುನಾಥ್ ಬಂದಿದ್ದ. ಇದಿಕೆ ಪ್ರತಿಕ್ರೀಯಿಸಿದ ಪತ್ನಿ ನಯನ ನೀನೆಷ್ಟು ಹಿಂಸೆ ಕೊಟ್ಟಿದ್ದೀಯಾ, ಹೊಡೆದಿದ್ದೀಯಾ ನಾನು ಬರಲ್ಲವೆಂದು ಹೇಳಿದ್ದಾರೆ. ಈ ವೇಳೆ ನಡೆದ ಜಗಳದಿಂದ ಪೆಟ್ರೋಲ್ ತಂದು ಮಂಜುನಾಥ್ ಬೆಂಕಿ ಹಚ್ಚಿಕೊಂಡುಆತ್ಮಹತ್ಯೆ ಶರಣಾಗಿದ್ದಾರೆ.