ಆಲಂಕಾರು:. ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಲಂಕಾರು ಶಾಖೆ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು.
ಈ ಹಿನ್ನಲೆಯಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಲಂಕಾರು ಶಾಖೆಯು ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿ ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮೋಹನ್ ರಾವ್ ಸುಳ್ಳಿ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಎಂ., ಆಂತರಿಕ ಲೆಕ್ಕಪರಿಶೋಧಕ ಗುಮ್ಮಣ್ಣ ಗೌಡ ಹೆಚ್., ನ್ಯಾಯವಾದಿ ಶಿವಪ್ರಸಾದ್ ಪುತ್ತಿಲ, ಹಿತೈಸಿಗಳಾದ ಬಾಲಕೃಷ್ಣ ಗೌಡ ಕತ್ಲಡ್ಕ, ದಾಮೋದರ ಗೌಡ ಕಕ್ವೆ, ದಯಾನಂದ ಆನಡ್ಕ, ಜನಾರ್ಧನ ಗೌಡ ಇಳಂತಿಲ, ಸದಾಶಿವ ಶೆಟ್ಟಿ ಮಾರಂಗ, ಲೋಕನಾಥ ವಜ್ರಗಿರಿ, ಶಾಖೆಯ ಕಟ್ಟಡ ಮಾಲಕ ರಾಧಾಕೃಷ್ಣ ರೈ, ಗ್ರಾಹಕ ಬಂಧುಗಳು, ಸಂಸ್ಥೆಯ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಾಹಕರು ಮತ್ತಿತ್ತರರು ಉಪಸ್ಥಿತರಿದ್ದರು.