ಪ್ರತಿಷ್ಠಿತ ಪುತ್ತೂರು ಕೋ ಓಪರೇಟಿವ್‍ ಟೌನ್‍ ಬ್ಯಾಂಕ್‍ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿ ರಚನೆ | ಸ್ಪರ್ಧಾ ಕಣದಲ್ಲಿರುವ ನನಗೆ ಮತದಾರರ ಪಟ್ಟಿ ನೀಡದ್ದಕ್ಕೆ ‘ಹ್ಯಾಕ್‍’ ಮಾಡಿ ಪಡೆದುಕೊಂಡಿದ್ದೇನೆ : ಪತ್ರಿಕಾಗೋಷ್ಠಿಯಲ್ಲಿ ಸುದರ್ಶನ್ ಗೌಡ

ಪುತ್ತೂರು: ಪ್ರತಿಷ್ಠಿತ ಕೋ ಓಪರೇಟಿವ್‍ ಟೌನ್‍ ಬ್ಯಾಂಕ್‍ನ ಆಡಳಿತ ಮಂಡಳಿಗೆ ಸಹಕಾರ ಭಾರತಿಯ ವಿರುದ್ಧ ಸ್ಪರ್ಧಿಸಲು ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ನಾನು ಸ್ಪರ್ಧಾ ಕಣದಲ್ಲಿದ್ದೇನೆ. ಈ ನಿಟ್ಟಿನಲ್ಲಿ ಬ್ಯಾಂಕ್‍ ನ ಮತದಾರರ ಪಟ್ಟಿಯನ್ನು ಕೇಳಿದ್ದಕ್ಕೆ ನೀಡದ ಹಿನ್ನಲೆಯಲ್ಲಿ ಬ್ಯಾಂಕ್‍ ನ ಮತದಾರರ ಪಟ್ಟಿಯನ್ನು ನಾನು ಹ್ಯಾಕ್‍ ಮಾಡಿ ಪಡೆದುಕೊಂಡಿದ್ದೇನೆ. ಇಂದಿನಿಂದಲೇ ಮನೆ ಮನೆಗೆ ತೆರಳಿ ಅಭಿಯಾನ ನಡೆಸಲಿದ್ದೇವೆ ಎಂದು ಹೋರಾಟ ಸಮಿತಿಯ ಪ್ರಮುಖ, ಚುನಾವಣಾ ಅಭ್ಯರ್ಥಿ ಸುದರ್ಶನ ಗೌಡ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಟೌನ್‍ ಬ್ಯಾಂಕ್‍ ಚುನಾವಣೆಗೆ ಸಂಬಂಧಿಸಿ ದೊಡ್ಡ ಮಟ್ಟದ ಚುನಾವಣಾ ಹೈಜಾಕ್ ತಂತ್ರಗಾರಿಕೆ ಬಯಲಾಗಿದೆ. ಪ್ರಸ್ತುತ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಕೆಲವು ಖತರ್‍ ನಾಕ್‍  ಪ್ರಮುಖರು ಮತದಾರರ ಪಟ್ಟಿಯನ್ನು ಕ್ಷೇತ್ರವಾರು ವಿಂಗಡಣೆ ಮಾಡಿ ಮತದಾರರ ಮೊಬೈಲ್‍ ಸಂಖ್ಯೆಯನ್ನು ಬ್ಯಾಂಕ್‍ ನಲ್ಲೆ ಮುದ್ರಿಸಿ ಬೆಂಬಲಿತ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಮತದಾರರ ಗುರುತು ಚೀಟಿಯನ್ನು ಹಂಚಿದ್ದಾರೆ. ಅಲ್ಲದೆ ಮಹಾಸಭೆಯಲ್ಲಿ ಚುನಾವಣೆ ಆಮಿಷಕ್ಕೆ ಕುಕ್ಕರ್ ಸೆಂಟ್ ಉಡುಗೊರೆಯನ್ನು ಮಹಾಸಭೆಯಲ್ಲಿ ಉಪಸ್ಥಿತರಿದ್ದ 1100 ಮಂದಿಗೆ ಹಂಚಿರುವುದಲ್ಲದೆ ಇನ್ನುಳಿದ ಒಂದು ಸಾವಿರ ಮಂದಿಗೆ ಉಡುಗೊರೆಯನ್ನು ಖರೀದಿಸಿ ಅಭಿಮಾನಿಗಳಿಗೆ ಹಾಗೂ ಮನೆ ಮನೆಗೆ ತೆರಳಿ ಹಂಚಲಾಗಿದೆ. ಈ ಕುರಿತು ಆರ್ ಬಿಐ, ಸಹಕಾರ ಸಚಿವರು, ಯುಸಿಬಿ ಮುಖ್ಯ ಕಾರ್ಯದರ್ಶಿ ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಈ ಮತದಾರರ ಪಟ್ಟಿಯನ್ನು ಈ ಬಾರಿ ಸ್ಪರ್ಧಿಸುತ್ತಿರುವ ನನಗೆ ನೀಡುವಂತೆ ಒತ್ತಾಯಿಸಿದ್ದೆ. ಆದರೆ ಅದು ಸಿಗದೇ ಹೋದಾಗ ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂದು ಹ್ಯಾಕ್‍ ಮಾಡಿ ಪಡೆದುಕೊಂಡೇ. ಇದೀಗ ಸಂಪೂರ್ಣ ಅಂದರೆ 3600 ಮತದಾರರ ಪಟ್ಟಿ ನನ್ನ ಕೈಯಲ್ಲಿದೆ ಎಂದು ತಿಳಿಸಿದರು.































 
 

ಕಳೆದ 25 ವರ್ಷಗಳಿಂದ ಟೌನ್‍ ಬ್ಯಾಂಕ್‍ನ ಸದಸ್ಯನಾಗಿದ್ದು, ಬ್ಯಾಂಕ್ ‍ನ ವ್ಯವಹಾರ, ಚರ್ಚೆಗಳಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಬ್ಯಾಂಕ್‍ ವ್ಯವಹಾರದಲ್ಲಿ ದುರಾಡಳಿತ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಡಳಿತ ಮಂಡಳಿಯಲ್ಲಿ ಆಗುತ್ತಿರುವ ಅವ್ಯವಹಾರಗಳನ್ನು ಬಯಲು ಮಾಡುವ ನಿಟ್ಟಿನಲ್ಲಿ ಸ್ಪರ್ಧಿಸಿದ್ದೇನೆ. ನಾನು ಗೆಲುವು ಸಾಧಿಸಿದರೆ ಎಲ್ಲಾ ಅವ್ಯವಹಾರಗಳನ್ನು ಸರಿ ಮಾಡಿ ಪಾರದರ್ಶಕ ಆಡಳಿತ ಮಾಡುಬೇಕೆಂಬುದು ನಮ್ಮ ಬಯಕೆ. ಈ ಬಾರಿ ಮತದಾರರು ವಿರುದ್ಧ ಪಾರ್ಟಿಗೆ ಮತ ನೀಡಿ ಬದಲಾವಣೆ ಕಾಣುವ ತವಕದಲ್ಲಿದ್ದಾರೆ. ಮತದಾರರೂ ಸಹಕರಿಸಬೇಕಾಗಿ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿ ಸದಸ್ಯರಾದ ಜೋನ್ ಸಿರಿಲ್‍ ರೋಡ್ರಿಗಸ್, ಅಶ್ರಫ್‍ ಕಲ್ಲೇಗ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top