ಚಾರ್ಮಾಡಿ ಘಾಟ್ : ಚಾರ್ಮಾಡಿಯ ಗುಡ್ಡದ ತುದಿಯಲ್ಲಿ ಕಾಡ್ಲಿಚ್ಚು ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ. ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದು ಬಂದಿಲ್ಲ
ಪ್ರಾಣಿ ಸೇರಿದಂತೆ ಅಪರೂಪದ ಸಸ್ಯ ಸಂಪತ್ತು ನಾಶವಾಗಿದೆ ಎಂಬುವುದಾಗಿ ಶಂಕೆ ವ್ಯಕ್ತವಾಗಿದೆ. ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ದ.ಕ. ಜಿಲ್ಲಾ ವಿಭಾಗದ ಘಾಟಿ ಪ್ರದೇಶ ಈ ಸ್ಥಳಕ್ಕೆ ಹತ್ತಿರವಿದ್ದು ಅಲ್ಲಿಗೂ ಬೆಂಕಿ ವ್ಯಾಪಿಸುವ ಭೀತಿ ಇದೆ.
ಚಾರ್ಮಾಡಿ ಘಾಟಿಯಲ್ಲಿ ಹೆಚ್ಚಾಗಿ ಬೇಸಿಗೆಯಲ್ಲಿ ಪ್ರತಿ ವರ್ಷ ಬೆಂಕಿ ಅನಾಹುತ ಉಂಟಾಗುತ್ತಿದ್ದು ಹಲವು ಎಕರೆ ಪ್ರದೇಶ ನಾಶವಾಗುತ್ತಿದೆ ಎನ್ನಲಾಗಿದೆ.