ಪುತ್ತೂರು: ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ನೂತನ ಆಡಳಿತ ಮಂಡಳಿಗೆ 17 ಮಂದಿ ನಿರ್ದೇಶಕರು ಹಾಗೂ ಸಲಹಾ ಸಮಿತಿಗೆ 19 ಮಂದಿ ಸದಸ್ಯರನ್ನು ಇಂದು ಆಯ್ಮೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರ ವಿವರ :
ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಪೈಕೆರೆ ಮನೋಹರ ಪಿ., ಉಪಾಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ, ಕಾರ್ಯದರ್ಶಿಯಾಗಿ ಕಪಿಲ್ ದುಗ್ಗಳ, ಖಜಾಂಚಿಯಾಗಿ ಪುರುಷೋತ್ತಮ ಮುಂಗ್ಲಿಮನೆ, ನಿರ್ದೇಶಕರುಗಳಾಗಿ ಅಂಬೆಕಲ್ಲು ಪ್ರವೀಣ್ ಕುಂಟ್ಯಾನ, ಎಂ.ಪಿ.ಉಮೇಶ್, ನವೀನ್, ಪುದಿಯನೆರವಿನ ರಿಶಿತ್, ಅಶೋಕ್ ಶೇಡಿ, ಕೆ.ವಿಜಯ ಗೌಡ ವೇಣೂರು, ಕಿಶೋರ್ ವಲಿಯಾರ್, ಯಲಿರಾಳು ಸೋಮಣ್ಣ, ಕೊಂಬಾರನ ರೋಶನ್, ಬಾಲಡಿ ಮನೋಜ್, ಧನಂಜಯ ಅಡ್ಪಂಗಾಯ, ಪೊನ್ನೆಚನ ಮೋಹನ, ಜ್ಞಾನೇಶ್ ಸುಳ್ಯ ಅವರನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಸಲಹಾ ಸಮಿತಿ ಸದಸ್ಯರ ವಿವರ :
ಸಲಹಾ ಸಮಿತಿಗೆ ಪಂಜಿಪಳ್ಳ ವೆಂಕಪ್ಪ ಗೌಡ, ಕೆ.ಆರ್.ಗಂಗಾಧರ, ಡಿ.ಬಿ.ಬಾಲಕೃಷ್ಣ, ಎಸ್.ಆರ್.ಸೂರಯ್ಯ, ಪೇರಿಯಾನ ಜಯಾನಂದ, ತೋಡಿಂಬೈಲು ಮನೋಹರ, ಪಾಣತ್ತಿಲ ಪಲಂಗಪ್ಪ, ನಾಗೇಶ್ ಕೆಡೆಂಜಿ, ದಯಾನಂದ ಆಲಡ್ಕ, ರಾಜೇಶ್ ಬೆಳ್ತಂಗಡಿ, ಅನಂತ ಕುಮಾರ್ ಕೋಳಿ ಮುಡಿಯಾನ, ಕೇಶವನಂದ ಯಳದಾಲ್, ತುಂತಾಜೆ ಗಣೇಶ್, ನಿತ್ಯಾನಂದ ಮುಂಡೋಡಿ, ಕೆ.ಮಾಧವ ಗೌಡ ಪೆರಿಯೋತ್ತಡಿ, ಸೂರಜ್ ವಲಂಬುರ್, ವಸಂತ ವೀರಮಂಗಲ, ಸದಾನಂದ ಮಾವೋಜಿ (ಅಕಾಡೆಮಿ ಅಧ್ಯಕ್ಷರು), ಸತೀಶ್ ಪಾಂಬಾರು ಅವರನ್ನು ಆಯ್ಕೆ ಮಾಡಲಾಯಿತು.
ಈ ಹಿಂದೆ ಕನ್ನಡ ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಸಲಹಾ ಸಮಿತಿಯ ಮುಖ್ಯಸ್ಥರಾಗಿ ಜಯರಾಮ ಗೌಡ, ಸಂಚಾಲಕರಾಗಿ ಎ.ಸಿ.ನಂದನ, ಸದಸ್ಯರಾಗಿ ನಳಿನ್ ಕುಮಾರ್ ಕೋಡ್ತುಗುಳಿ, ವೆಂಕಪ್ಪ ಗೌಡ ಪೆರಿಯಾನ, ಜಯಾನಂದ, ಯಂ.ಬೋಜಪ್ಪ ಗೌಡ, ಯಲ್ದಾಳ್ ಕೇಶವಾನಂದ, ತುಂತಜೆ ಗಣೇಶ್, ಕುಂಟಿಕಾನ ಲಕ್ಷ್ಮಣ ಗೌಡ ಅವರು ಸೇವೆ ಸಲ್ಲಿಸುತ್ತಿದ್ದರು.
ಈ ಹಿಂದೆ ಸಂಘದ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಫೆ.12, 2012 ರಲ್ಲಿ ನಿತ್ಯಾನಂದ ಮುಂಡೋಡಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಜಟ್ಟಿಪಳ್ಳದ ನಿವೇಶನಕ್ಕೆ ಆವರಣ ಗೋಡೆ ರಚಿಸಲು ಶಂಕುಸ್ಥಾಪನೆ ನಡೆಸುವುದೆಂದು ತೀರ್ಮಾನಿಸಲಾಗಿ, ಬಳಿಕ ಫೆ.26, 2013 ರಂದು ಶಂಕು ಸ್ಥಾಪನಾ ಸಮಾರಂಭ ನಡೆಸಲಾಯಿತು. ಕುರುಂಜಿ ಡಾ.ಚಿದಾನಂದ ಅವರ ಅಮೃತ ಹಸ್ತದಿಂದ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕುರುಂಜಿ ಡಾ.ಚಿದಾನಂದ ಅವರು ಒಂದು ಲಕ್ಷ ರೂ. ದೇಣಿಗೆಯನ್ನೂ ನೀಡಿದ್ದರು. ಬಳಿಕದ ದಿನಗಳಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಅಭಿವೃದ್ಧಿ ಸಂಘದ ಎಲ್ಲಾ ತಾಲೂಕು ಸಮಿತಿಯನ್ನು ಪುನರ್ ರಚಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಉಳಿದಂತೆ ವಿರಾಜಪೇಟೆ, ಸೋಮವಾರಪೇಟೆ ತಾಲೂಕು ಸಮಿತಿ ರಚಿಸಲು ಉಸ್ತುವಾರಿಗಳನ್ನು ನೇಮಿಸಲಾಯಿತು.