ಪುತ್ತೂರು : ಜಿ.ಎಲ್.ಸಮೂಹ ಸಂಸ್ಥೆಗಳ ವತಿಯಿಂದ ಸಂಸ್ಥೆಯ ವಿವಿಧ ಶಾಖೆಯ ಸಿಬ್ಬಂದಿಗಳಿಗೆ ನಾಲ್ಕು ಓವರಿನ ಓವರ್ ಆರ್ಮ್ ಕ್ರಿಕೇಟ್ ಪಂದ್ಯಾಟ “ಜಿ.ಎಲ್.ಟ್ರೋಫಿ””ಪುತ್ತೂರಿನಲ್ಲಿ ನಡೆಯಿತು.
ಪಂದ್ಯಾಟವನ್ನು ಜಿ.ಎಲ್. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ್ ಆಚಾರ್ಯ ಹಾಗೂ ರಾಜೀ ಮಲರಾಮ್ ಆಚಾರ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಪ್ರದರ್ಶನ ಪಂದ್ಯಾಟ ನಡೆಯಿತು.
ಈ ಸಂದರ್ಭದಲ್ಲಿ ಜಿ.ಎಲ್. ಸಮೂಹ ಸಂಸ್ಥೆಯ ಸುಧನ್ವ ಆಚಾರ್ಯ, ಅರುಂಧತಿ ಆಚಾರ್ಯ, ಶ್ರೀರಾಮ್ ಆಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಹಾಸನ ಶಾಖೆ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಪುತ್ತೂರು ಪಾರ್ಥ ಶಾಖೆ ಪಡೆದುಕೊಂಡಿತು. ಪುತ್ತೂರು ಪ್ರಾಚಿ ಶಾಖೆ ತೃತೀಯ ಸ್ಥಾನ ಪಡೆದುಕೊಂಡಿತು.