ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಶ್ರೀ ದೇವರ ಬಯ್ಯದ ಬಲಿ ಉತ್ಸವದಂದು ಅಂಗವಾಗಿ ‘ಸಮರ್ಪಣ್ ವಿಟ್ಲ’ ಅರ್ಪಿಸುವ “ಸಮರ್ಪಣ್ ಕಲೋತ್ಸವ-2025” ಹಾಗೂ ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ ಶನಿವಾರ ಶ್ರೀ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಿತು.
ಭಾರತಮಾತೆ ಭಾವಚಿತ್ರದ ಎದುರು ಸಮರ್ಪಣ್ ವಿಟ್ಲ ಸಂಸ್ಥೆಯ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಭಾರತಮಾತೆ ಭಾವಚಿತ್ರದ ಎದುರು ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿ, ಸಮರ್ಪಣ್ ಸಂಸ್ಥೆಯವರು ದೇವಸ್ಥಾನ ಕೆಲಸದ ಜೊತೆಗೆ ಸಮಾಜ ಸೇವೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಕಷ್ಟದಲ್ಲಿ ಇರುವವರಿಗೆ ಒಳ್ಳೆಯ ಮನಸ್ಸಿನಿಂದ ನೆರವಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಂಸ್ಕೃತಿ, ಸಂಸ್ಕಾರ ಕೊಡುವ ಕೆಲಸವನ್ನೂ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ, ಸಮಾಜ ಸೇವೆ ಮಾಡಲು ಸೇವಾ ಮನೋಭಾವ ಇರಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದ ಪ್ರತಿಯೊಂದು ಮಜಲುಗಳನ್ನು ದಾಟಿದಂತಾಗುತ್ತದೆ. ಸಮರ್ಪಣ್ ಸಂಸ್ಥೆಯ ಕಾರ್ಯವೈಖರಿ ಕೇವಲ ಪ್ರಚಾರಕ್ಕಾಗಿ ಅಲ್ಲ. ಇನ್ನಷ್ಟು ಮಂದಿ ಕೈಜೋಡಿಸಲಿ ಎಂಬ ನಿಟ್ಟಿನಲ್ಲಿ ಒಳ್ಳೆಯ ದೃಷ್ಟಿಕೋನ ಇಟ್ಟುಕೊಂಡು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಹರೀಶ್ ಉಬರಡ್ಕ ಮಾತನಾಡಿ, ನಾಲ್ಕೈದು ಮನೆ ಸಂತೋಷದಿಂದ ಗುರುತಿಸಿ ಕೊಟ್ಟಿದ್ದೇವೆ. ದೇವರು ಮೆಚ್ಚುವ ಕೆಲಸ. ಹುಟ್ಟು ಸಮರ್ಪಣ್ ಸಂಸ್ಥೆ ಉದಾಹರಣೆ. ಒಂದೇ ಮನಸ್ಸಿನಿಂದ ಕಜಾತಿ ಬೇಧ ರಮರೆದು. ಎಲ್ಲರಿಗೂ ಈ ರೀತಿಯ ಸೇವೆ ಮಾಡುವುದರಿಂದ ಕಟ್ಟಡ ಕಡೆಯ ವ್ಯಕ್ತಿಗ ಸ್ಪಂದನೆ ಮಾಡಿದಾಗ ನಮಗೆ ಶ್ರೀದೇವರು ಆಶೀರ್ವಾದ ಮಾಡುತ್ತಾರೆ. ಯುವಕ ಮಿತ್ರರಿಗೆ ಶುಭವಾಗಲಿ. ಇನ್ನೂ ನಿರಂತರ ಸೇವೆ ಮಾಡುವ ಶಕ್ತಿ ದೇವರು ಒದಗಿಸಲಿ ಎಂದರು.
ಯುವ ಉದ್ಯಮಿ ಸದಾನಂದ ಶೆಟ್ಟಿ ಆಲ್ಚಾರ್ ಮಾತನಾಡಿ, ಯಾವುದೇ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಮಾಜ ಸೇವೆ ಮಾಡುವುದು ತುಂಬಾ ಕಷ್ಟ. ಸಮಯವೂ ನೀಡಬೇಕು. ಜವಾಬ್ದಾರಿ ತೆಗೆದುಕೊಂಡವರ ಪಾಲು ಮುಖ್ಯವಾಗಿದೆ. ಸಮಾಜಮುಖಿ ಕೆಲಸ ಮಾಡಬೇಕಾದರೆ ಬೆಂಬಲವಾಗಿ ನಿಂತು ಕೈಜೋಡಿಸಿಕೊಂಡು ಹೋದರೆ ನಿರಂತರವಾಗಿ ಸಮಾಜ ಮುಖಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಬಹುದು. ಸಮರ್ಪಣ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಎಸ್ ಎಲ್ ವಿ ಬುಕ್ಸ್ ಸಂಸ್ಥೆಯ ಮಾಲಕ ದಿವಾಕರ ದಾಸ್ ನೇರ್ಲಾಜೆ ಮಾತನಾಡಿ, ದುಡಿಮೆಯ ಒಂದಂಶವನ್ನು ಸಮಾಜ ಸೇವೆಗೆ ಮೀಸಲಿಡುವ ಸಂಸ್ಥೆಯವರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜ ಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಭಗವಂತ ನೀಡಲಿ. ನಿಮ್ಮ ಜೊತೆ ನಾನಿದ್ದೇನೆ ಎಂದರು.
ಸಮಾರಂಭದಲ್ಲಿ ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಹಸ್ತಾಂತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೈವನರ್ತಕ ಲಕ್ಷ್ಮಣ ಪರವ ಕಾಪುಮಜಲು, ವಾದ್ಯ ವಾದಕ ಲಕ್ಷ್ಮಣ, ಜೇನು ಕೃಷಿಕ ಸುಧಾಕರ ಪೂಜಾರಿ ಕೇಪು, ಉದ್ಯಮಿ ದಿವಾಕರ ದಾಸ್ ನೇರ್ಲಾಜೆ, ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಕೀರ್ತಿ, ವಿದ್ಯಾಭ್ಯಾಸದಲ್ಲಿ ವೈಭವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ ಎಲ್ ವಿ ಬುಕ್ಸ್ ಸಂಸ್ಥೆಯ ಮಾಲಕ ದಿವಾಕರ ದಾಸ್ ನೇರ್ಲಾಜೆ ,ಯುವ ಉದ್ಯಮಿ ಸದಾನಂದ ಶೆಟ್ಟಿ ಆಲ್ಚಾರ್ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪುತ್ತೂರು ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನಿತಿನ್ ಪಕಳ, ಸಾಫ್ಟ್ ವೇರ್ ಇಂಜಿನಿಯರ್ ಶಿವರಾಜ್ ಎಸ್. ಸಾಲ್ಯಾನ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಸಿ.ಎಚ್., ಸಾರಡ್ಕ ಸುರಕ್ಷಾ ಮಡ್ ಬ್ಲಾಕ್ ಮಾಲಕ ಸಾತ್ವಿಕ್ ಖಂಡೇರಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ರಜಿತ್ ಆಳ್ವ ಎರ್ಮಿನಿಲೆ, ವಿಟ್ಲ ಯುವ ವಾಹಿನಿ ಘಟಕದ ಅಧ್ಯಕ್ಷ ಹರೀಶ್ ಮರುವಾಳ, ಉದ್ಯಮಿ ರಾಜೇಶ್ ತೋಡ್ಲ ಪಾಲ್ಗೊಂಡಿದ್ದರು.
ಸಮರ್ಪಣ್ ವಿಟ್ಲ ಸಂಸ್ಥೆಯ ಅಧ್ಯಕ್ಷ ಯಶವಂತ್ ಎನ್. ಸ್ವಾಗತಿಸಿದರು. ಸಂಸ್ಥೆಯ ಹರೀಶ್ ಕುಕ್ಕುಜಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ರವಿಶಂಕರ್ ವಂದಿಸಿದರು. ಕಾರ್ಯದರ್ಶಿ ಪ್ರಕಾಶ್, ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಸಮರ್ಪಣ್ ಕಲೋತ್ಸವ-2025 ರ ಅಂಗವಾಗಿ ತುಳು ರಂಗಭೂಮಿಯಲ್ಲಿ ಮೊದಲ ಬಾರಿಗೆ ಎಲ್ ಇಡಿ ತಂತ್ರಜ್ಞಾನದ ಜೊತೆಗೆ ಸಿನಿಮಾ ಸ್ಪರ್ಶದ ನೀಡಿ ವಿಭಿನ್ನ ಸಿನಿ ನಾಟಕ “ಪೊರಿಪುದಪ್ಪೆ ಜಲದುರ್ಗೆ” ಚಿತ್ರಾಪುರದ ಸತ್ಯ ಕಥಾ ಆಧಾರಿತ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.