ಸೈಫ್‌ಗೆ ಇರಿದ ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರ

ಹಿಂದು ಹೆಸರು ಇಟ್ಟುಕೊಂಡು ನೌಕರಿಗೆ ಸೇರುತ್ತಿದ್ದ ಆರೋಪಿ

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹತ್ಯಾಯತ್ನ ಮಾಡಿದ ವ್ಯಕ್ತಿಯನ್ನು ಘಟನೆ ನಡೆದ 70 ಗಂಟೆಗಳ ಬಳಿಕ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಥಾಣೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಯಿಂದ ಈತ ಬಾಂಗ್ಲಾದೇಶದ ಅಕ್ರಮ ನುಸುಳುಕೋರ ಎಂಬ ಮಾಹಿತಿ ಹೊರಬಿದ್ದಿದೆ.
ಬಂಧಿತ ಆರೋಪಿ ಭಾರತೀಯನಲ್ಲ, ಬದಲಿಗೆ ಬಾಂಗ್ಲಾದೇಶದ ನುಸುಳುಕೋರ ಎಂಬ ಅನುಮಾನವಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಾಮ್‌ ತಿಳಿಸಿದ್ದಾರೆ. ಆರೋಪಿ ಬಳಿ ಭಾರತಕ್ಕೆ ಸಂಬಂಧಿಸಿದ ಆಧಾರ್ ಕಾರ್ಡ್ ಅಥವಾ ಇನ್ನಿತರ ದಾಖಲೆಗಳು ಪತ್ತೆಯಾಗಿಲ್ಲ. ಆತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿದ್ದಾನೆ. ಆದರೆ ಆತನ ಮೂಲ ಹೆಸರು ಮೊಹಮ್ಮದ್ ಷರೀಫುಲ್ಲಾ ಇಸ್ಲಾಂ ಶೆಹ​ಜಾದ್ ಎಂದು ಗೆಡಾಮ್ ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದು, ಇಂದು ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಿ ಆ ನಂತರ ವಶಕ್ಕೆ ಪಡೆಯಲಾಗುವುದು. ಆರೋಪಿ ಥಾಣೆಯ ಪಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಈತ ಇಲ್ಲಿ ಬೇರೆ ಬೇರೆ ಹೆಸರು ಮಾಡಿಕೊಂಡು ಓಡಾಡುತ್ತಿದ್ದ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top