ಕುಂದಾಪುರ : ಬಳ್ಳೂರು ಸಮೀಪದ ಹೊಳೆಯ ಬದಿಗೆ ಹೋಗಿದ್ದು ಅಲ್ಲಿ ಸ್ಕೂಟಿಯನ್ನು ನಿಲ್ಲಿಸಿ, ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.
ಶೃತಿ ಹಾಗೂ ವಿನಯ್ ಅಂತರ್ಜಾತಿ ವಿವಾಹವಾಗಿದ್ದು, ಸಾಲಿಗ್ರಾಮದ ಮೂಲದ ಶೃತಿ ಬ್ರಾಹ್ಮಣರಾಗದ್ದರು, ಕಾಲೇಜಲ್ಲಿರುವಾಗ ವಿನಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಸ್ತುತವಾಗಿ ಬಳ್ಳೂರು ಸಮೀಪದ ಬಿಹೆಚ್ ನಲ್ಲಿ ನೆಲೆಸಿದ್ದ ವಿನಯ್ ಹಾಗೂ ಶೃತಿ ದಂಪತಿ, ಬಳ್ಳೂರಿನಲ್ಲಿ ಜಾಗ ಖರೀದಿ ಮಾಡಿದ್ದರು ಈ ಸಂಬಂಧ ಬುಧವಾರ ಜಾಗದ ನೋಂದಣಿಗೆ ಹೋಗಿ ಮರುಳಿದ ಬಳಿಕ ಶ್ರುತಿ ಅವರು ತನ್ನ ಸ್ಕೂಟಿಯಲ್ಲಿ ಬಳ್ಳೂರು ಸಮೀಪದ ಹೊಳೆಯ ಬದಿಗೆ ಹೋಗಿದ್ದು ಅಲ್ಲಿ ಸ್ಕೂಟಿಯನ್ನು ನಿಲ್ಲಿಸಿ, ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಘಟನೆ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಆದರೆ ಹಣಕಾಸಿನ ವ್ಯವಹಾರದಲ್ಲಿ ಮೋಸವಾಗಿರುವ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶೃತಿ ಅವರು ಹತ್ತನೇ ತರಗತಿ ಓದುತ್ತಿರುವ ಪುತ್ರಿಯನ್ನು ಅಗಲಿದ್ದಾರೆ.