ವಿಟ್ಲ : ವಿಟ್ಲದಲ್ಲಿ ವೀರಕಂಬ ವ್ಯಾಪ್ತಿಯ ಶಾಲೆಯೊಂದರಲ್ಲಿ ಶಿಕ್ಷಕ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ದೂರಿನ ಆಧಾರದಲ್ಲಿ ಶಿಕ್ಷಕನನ್ನು ವಿಚಾರಿಸಲಾಗಿದೆ.
ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಈತ, ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಯನ್ನು ಪಡೆದಿದ್ದ ಎನ್ನಲಾಗಿದೆ. ಶಾಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಇತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪ ಕೇಳಿ ಬಂದಿದ್ದು, ಶಿಕ್ಷಕನ ವಿರುದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತನಿಖೆ ನಡೆಸಲಾಗುತ್ತಿದೆ.
ಕೇವಲ ವಿಟ್ಲದ ವೀರಕಂಬ ವ್ಯಾಪ್ತಿಯ ಶಾಲೆಯಲ್ಲಿ ಅಲ್ಲದೆ ಇದೇ ಶಿಕ್ಷಕ ಈ ಹಿಂದೆಯೂ ಕರೋಪಾಡಿ ಗ್ರಾಮದಲ್ಲಿ ಶಿಕ್ಷಕನಾಗಿದ್ದಾಗ ಕೃತ್ಯ ಎಸೆಗಿದ್ದು ಇದರ ಬಗ್ಗೆ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಈತನನ್ನು ಬೇರೆ ಕಡೆಗೆ ವರ್ಗಾಯಿಸಿ, ವಿಷಯ ಮುಚ್ಚಿ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.