ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಹೆಂಡತಿಗೆ 14 ವರ್ಷ ಜೈಲು

ಭ್ರಷ್ಟಾಚಾರ ಪ್ರಕರಣದಲ್ಲಿ ಸುದೀರ್ಘ ಕಾರಾಗೃಹ ವಾಸ

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಅಲ್ಲಿನ ನ್ಯಾಯಾಲಯ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇಮ್ರಾನ್‌ ಜೊತೆಗೆ ಅವರ ಪತ್ನಿ ಬುಶ್ರಾ ಬೀಬಿ ಅವರಿಗೂ ಶಿಕ್ಷೆ ವಿಧಿಸಿದೆ. ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ 7 ಲಕ್ಷ ರೂ. ಇಮ್ರಾನ್ ಖಾನ್‌ಗೆ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಇಮ್ರಾನ್‌ ಆರು ತಿಂಗಳು ಮತ್ತು ಬುಶ್ರಾ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಮತ್ತು ಅವರ ಪತ್ನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇಮ್ರಾನ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳಿವೆ. ಇಮ್ರಾನ್‌ ಖಾನ್ ಮತ್ತು ಬೀಬಿ ಅವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಮುಖ ಉದ್ಯಮಿ ಸೇರಿದಂತೆ ಇತರ ಆರೋಪಿಗಳು ಪ್ರಸ್ತುತ ಪಾಕಿಸ್ಥಾನದಿಂದ ಹೊರಗಿದ್ದಾರೆ. ತೀರ್ಪು ಬಂದ ತಕ್ಷಣ ಬುಶ್ರಾ ಬೀಬಿಯನ್ನು ಬಂಧಿಸಲಾಯಿತು. ಇಮ್ರಾನ್ ಖಾನ್ ಈಗಾಗಲೇ ಜೈಲಿನಲ್ಲಿದ್ದಾರೆ.































 
 

ಇಮ್ರಾನ್​ ಖಾನ್​ ಅವರನ್ನು 2023ರ ಮೇ 9ರಂದು ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ವಿಶ್ವವಿದ್ಯಾಲಯದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪ ಇಮ್ರಾನ್‌ ಮೇಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top