ಎಣ್ಮೂರು: ಪ್ರತಿಷ್ಠಿತ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಹಕಾರ ಭಾರತಿ ತೆಕ್ಕೆಗೆ | ಸಹಕಾರ ಭಾರತಿಯ 11 ಅಭ್ಯರ್ಥಿಗಳೂ ಆಯ್ಕೆ

ಎಣ್ಮೂರು: ಮುರುಳ್ಯ-ಎಣ್ಮೂರು ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಆಡಳಿತ ಸಹಕಾರ ಭಾರತಿ ತೆಕ್ಕೆಗೆ ಬಿದ್ದಿದೆ.

ಸಾಮಾನ್ಯ ಕ್ಷೇತ್ರದಿಂದ ರೂಪರಾಜ ರೈ, ರಾಜೇಂದ್ರ ಪ್ರಸಾದ್ ಶೆಟ್ಟಿ, ವಸಂತ ಹೆಚ್‍.ಕೆ.ಹೇಮಳ, ನಾಗೇಶ್‍ಆಳ್ವ ಕೆ., ಅನೂಪ್‍ ಬಿಳಿಮಲೆ, ನೇಮಿಶ ಕಡೀರ, ಹಿಂದುಳಿದ ವರ್ಗ ಪ್ರವರ್ಗ ಬಿ ಯಿಂದ ವಸಂತ ನಡುಬೈಲು, ಶಿವರಾಮ ಸಿ., ಪರಿಶಿಷ್ಟ ಜಾತಿಯಿಂದ ಮುತ್ತಪ್ಪ ಎಸ್‍., ಮಹಿಳಾ ಮೀಸಲಾತಿಯಿಂದ ಸುಧಾರಾಣಿ ಕಡೀರ, ನವ್ಯಶ್ರೀ ಕೆ.ಬಿ. ಅಲೆಂಗಾರ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.

25 ವರ್ಷಗಳಿಂದ ಸಹಕಾರಿಗಳಿಗಾಗಿ, ಸಹಕಾರಿಗಳಿಂದ ಮತ್ತು ಸಹಕಾರಿಗಳಿಗೋಸ್ಕರ ಎಂಬ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಆಡಳಿತ ಮಂಡಳಿ ಅಧಿಕಾರದಲ್ಲಿ ಕಾರ್ಯಾಚರಿಸುತ್ತಿತ್ತು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top