ವಿಟ್ಲ : ಮಹೋತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವರ ಬಯ್ಯದ ಬಲಿ ಉತ್ಸವ ಜ.18 ಶನಿವಾರ ನಡೆಯಲಿದ್ದು, ಅಂದು ಸಮರ್ಪಣ್ ವಿಟ್ಲ ಅರ್ಪಿಸುವ ಸಮರ್ಪಣ್ ಕಲೋತ್ಸವ – 2025 ಜರುಗಲಿದೆ.
ಕಲೋತ್ಸವದ ಅಂಗವಾಗಿ ರಾತ್ರಿ 8 ರಿಂದ ಸಾಧಕರಿಗೆ ಗೌರವಾರ್ಪಣೆ ಹಾಗೂ ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಗುತ್ತು, ಬೆಂಗಳೂರು ಕೆ.ಎಸ್. ಆರ್. ಟಿಸಿ ಕೇಂದ್ರ ಕಛೇರಿಯ ಕಾನೂನು ಅಧಿಕಾರಿ ವಿ. ನರಸಿಂಹ ವರ್ಮ, ಬೆಂಗಳೂರು ಶೈನ್ ಇಂಡಿಯಾ ಗ್ರೂಪ್ ಮೆನೇಜಿಂಗ್ ಡೈರೆಕ್ಟರ್ ಉದಯ ಕುಮಾರ್ ಆರ್., ಬೆಂಗಳೂರಿನ ಉದ್ಯಮಿ ಸದಾನಂದ ಶೆಟ್ಟಿ ಆಲ್ಚಾರ್, ಪುತ್ತೂರು ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನಿತಿನ್ ಪಕಳ, ಜಿ.ಎಸ್.ನೆಕ್ಷಸ್ ಬಿಲ್ಡರ್ & ಡೆವಲಪರ್ಸ್ ಮಾಲಕ ಪ್ರಸಾಸ್ ಕೆ.ಎನ್., ಪುತ್ತೂರಿನ ಉದ್ಯಮಿ ನಿತಿನ್ ಕುಮಾರ್ ಮಂಗಳ, ಕಲ್ಲಡ್ಕ ಯುವ ಉದ್ಯಮಿ, ಸಾಫ್ಟ್ ವೇರ್ ಇಂಜಿನಿಯರ್ ಶಿವರಾಜ್ ಎಸ್. ಸಾಲ್ಯಾನ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಸಿ. ಯಚ್, ಸಾರಡ್ಕ ಸುರಕ್ಷಾ ಮಡ್ ಬ್ಲಾಕ್ ನ ಮಾಲಕ ಸಾತ್ವಿಕ್ ಎಸ್. ಖಂಡೇರಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ರಜಿತ್ಆಳ್ವ ಎರ್ಮಿನಿಲೆ, ಯುವವಾಹಿನಿ ವಿಟ್ಲ ಘಟಕದ ಅಧ್ಯಕ್ಷ ಹರೀಶ್ ಮರುವಾಳ, ಉದ್ಯಮಿ ರಾಜೇಶ್ ತೋಡ್ಲ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8.30 ಕ್ಕೆ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಸೂಪರ್ ಹಿಟ್ ಸಿನಿ ನಾಟಕ ‘ಪೊರಿಪುದಪ್ಪೆ ಜಲದುರ್ಗೆ’ ಚಿತ್ರಾಪುರದ ಸತ್ಯ ಕಥಾ ಆಧಾರಿತ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ತುಳು ಗಭೂಮಿಯಲ್ಲಿ ಮೊದಲ ಬಾರಿಗೆ ಎಲ್ ಇಡಿ ತಂತ್ರಜ್ಞಾನ ಜೊತೆಗೆ ಸಿನಿಮಾ ಸ್ಪರ್ಶ ನೀಡಿ ದಾಖಲೆಗಳಿಸಿದ ಈ ವರ್ಷದ ವಿಭಿನ್ನ ನಾಟಕ ನಡೆಯಲಿದೆ ಎಂದು ಸಮರ್ಪಣ್ ಕಲೋತ್ಸವ – 2025 ರ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಅಧ್ಯಕ್ಷ ಯಶವಂತ್ ಎನ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.