ವಿಟ್ಲ : ಕೆ.ಪಿ.ಎಲ್. ಕುಳಾಲು ಇದರ ಆಶ್ರಯದಲ್ಲಿ ಲೀಗ್ ಮಾದರಿಯ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಕುಳಾಲು ಪ್ರೀಮಿಯರ್ ಲೀಗ್ ಸೀಸನ್ 11, ಜ.18 ರಂದು ಸಂಜೆ 7 ಗಂಟೆಗೆ ಕುಳಾಲು ವಾರಾಹಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕುಳಾಲು ಪ್ರೀಮಿಯರ್ ಲೀಗ್ ಸೀಸನ್ 11ರ ಕ್ರಿಕೇಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 15,555 KPL ಟ್ರೋಫಿ ಹಾಗೂ ದ್ವಿತೀಯ ಬಹುಮಾನ 11,111 KPL ಟ್ರೋಫಿಯನ್ನು ನೀಡಲಿದ್ದಾರೆ. ಉತ್ತಮ ದಾಂಡಿಗ, ಉತ್ತಮ ದಾಳಿಗಾರ, ಹಾಗೂ ಸವ್ಯಸಾಚಿ ಟ್ರೋಫಿಯನ್ನು ನೀಡಿ ಗೌರವಿಸಲಾಗುವುದು.
ಪಂದ್ಯಾಕೂಟವು 5 ಓವರ್ಗಳದ್ದಾಗಿರುತ್ತದೆ. ಒಬ್ಬರಿಗೆ 2 ಓವರ್ ಎಸೆಯಲು ಅವಕಾಶವಿದೆ 2+1+1+1, ಲೆಗ್ ಸ್ಪಿನ್ ಹಾಗೂ ಆಫ್ ಸ್ಪಿನ್‍ಗೆ ಮಾತ್ರ ಅವಕಾಶವಿದೆ, ಅಂಪಾಯರ್ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ, ತಂಡಗಳಿಗೆ ಸಮವಸ್ತ್ರ ಕಡ್ಡಾಯವಾಗಿ ಧರಿಸತಕ್ಕದ್ದು, ಕುಳಾಲಿನ ಆಟಗಾರರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ.