ಪುತ್ತೂರು: ಶಿವಳ್ಳಿ ಕ್ರಿಕೆಟರ್ಸ್ ಪುತ್ತೂರು ಆಯೋಜಿಸಿರುವ 5ನೇ ವರ್ಷದ ಆಹ್ವಾನಿತ 12 ಶಿವಳ್ಳಿ ಬ್ರಾಹ್ಮಣರ ತಂಡಗಳ ಅಂತರ್ ರಾಜ್ಯ ಮಟ್ಟದ ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಕೂಟ ಶಿವಳ್ಳಿ ಕ್ರಿಕೆಟ್ ಲೀಗ್- ಸೀಸನ್ 5 ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ಪಂದ್ಯಕೂಟವನ್ನು ಬ್ರಹ್ಮಶ್ರೀ ವೇ.ಮೂ.ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ಉದಯ ತಂತ್ರಿ ಕೆಮ್ಮಿಂಜೆ, ವೇ.ಮೂ.ಹರೀಶ ಬೈಪಾಡಿತ್ತಾಯ ಬಜಪ್ಪಳ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಲಾ.ಟಿ ಶೆಟ್ಟಿ, ಪ್ರಖರ ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಡಾ.ಸುರೇಶ ಪುತ್ತೂರಾಯ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಮಹೇಶ್ ಕಜೆ, ದಿವಾಕರ ನಿಡ್ವಣ್ಣಾಯ, ಬಾಲಕೃಷ್ಣ ಕಣ್ಣರಾಯ, ಸುಬ್ರಹ್ಮಣ್ಯ ಕಡಂಬಳಿತ್ತಾಯ ಮುಂತಾದವರು ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪುರೋಹಿತ ವೇ. ಮೂ. ಸರ್ವೇಶ್ವರ ಕೇಕುಣ್ಣಾಯ, ವೀಣಾ ನಾಗೇಶ್ ತಂತ್ರಿ, ಪ್ರಖರ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸುಧೀಂದ್ರ ಕುದ್ದಣ್ಣಾಯ, ಡಾ. ಶ್ರೀಪತಿ ರಾವ್, ರಂಗನಾಥ ಉಂಗ್ರುಪುಳಿತ್ತಾಯ, ಶಿವರಾಜ್ ಅಡಿಗ, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಪ್ರಭಾಕರ ಕಲ್ಲೂರಾಯ, ಪಾವಂಜೆ ಸತೀಶ ಭಟ್, ವೆಂಕಟೇಶಮೂರ್ತಿ ಉಪಾಧ್ಯ, ಬ್ರಹ್ಮಶ್ರೀ ಗಿರಿಪ್ರಕಾಶ್ ತಂತ್ರಿ ಪೊಳಲಿ, ನನ್ಯ ಅಚ್ಚುತ ಮೂಡತ್ತಾಯ, ಭಾಸ್ಕರ್ ಆಚಾರ್ ಹಿಂದಾರ್, ಹರೀಶ್ ಪುತ್ತೂರಾಯ ಮುಂತಾದವರು ಉಪಸ್ಥಿತರಿದ್ದರು.
ಈ ಪಂದ್ಯಕೂಟದಲ್ಲಿ ಉಡುಪಿ, ಕೊಡಗು, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 150ಕ್ಕೂ ಅಧಿಕ ಆಟಗಾರರು 12 ತಂಡಗಳಾಗಿ ಪಾಲ್ಗೊಂಡರು. ಶಿವಳ್ಳಿ ಫ್ರೆಂಡ್ಸ್ ಪಾವಂಜೆ ತಂಡ ಪ್ರಥಮ, ವಿಪ್ರಪ್ರಿಯರು ಉಜಿರೆ ತಂಡ ದ್ವಿತೀಯ ಬಹುಮಾನ ಪಡೆದರು. ಪಾವಂಜೆ ತಂಡದ ಅವನೀಶ್ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ ಪಡೆದರೆ, ಉಜಿರೆ ತಂಡದ ದುರ್ಗಪ್ರಸಾದ್ ಕೆರ್ಮಣ್ಣಾಯ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದರು.
ಡಾ.ಸುಜಯ್ ತಂತ್ರಿ ಕೆಮ್ಮಿಂಜೆ ಸ್ವಾಗತಿಸಿದರು ಕಾರ್ಯಕ್ರಮ ಆಯೋಜಕ ಹರಿಕೇಶವ ಕಲ್ಲೂರಾಯ ಮಧೂರು ಕಾರ್ಯಕ್ರಮ ನಿರೂಪಿಸಿದರು. ಗುರುರಂಜನ್ ಪುಣಿಂಚತ್ತಾಯ ವಂದಿಸಿದರು.