ಕೆದಿಲ: ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಬಿ. ಪೆರ್ನಾಜೆ ಸತತ ಮೂರನೇ ಅವಧಿಗೆ, ಉಪಾಧ್ಯಕ್ಷರಾಗಿ ಧನಂಜಯ ನಾಯ್ಕ ಮುದ್ರಜೆ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ನೇತೃತ್ವದ ಮೈತ್ರಿ ಕೂಟವು ಎಲ್ಲ 12 ಸ್ಥಾನಗಳನ್ನೂ ತನ್ನದಾಗಿಸಿಕೊಂಡಿತ್ತು. 3 ನಿರ್ದೇಶಕರು ಅವಿರೋಧ ಆಯ್ಕೆಯಾದರು, 9 ನಿರ್ದೇಶಕರು ಚುನಾವಣೆಯಲ್ಲಿ 60%ಕ್ಕಿಂತಲೂ ಅಧಿಕ ಮತಗಳನ್ನು ಪಡೆದು ವಿಜಯಿಗಳಾದರು.
ಸಾಲಗಾರ ಕ್ಷೇತ್ರದಲ್ಲಿ ಸಹಕಾರಭಾರತಿ, ಬಿಜೆಪಿ ಬೆಂಬಲಿತ ಸತೀಶ ಕುಕ್ಕಕುಮೇರಿ (ಪ. ಜಾತಿ ಮೀಸಲು), ಬಾಲಕಷ್ಣ ಗೌಡ ಕಲ್ಲಾಜೆ (ಹಿಂ. ವರ್ಗ ಬಿ) ಅವಿರೋಧ ಆಯ್ಕೆಯಾದರು. ಧನಂಜಯ ನಾಯ್ಕ ಮುದ್ರಜೆ (ಪ. ಪಂಗಡ), ಚಂದ್ರಾವತಿ ಆನಡ್ಕ ಮತ್ತು ಜಯಂತಿ ಧನಂಜಯ ಶೆಟ್ಟಿ ಮಿತ್ತಿಲ (ಮಹಿಳಾ ಮೀಸಲು), ಅಶ್ವತ್ ಕಾಂತುಕೋಡಿ, ಲಕ್ಷ್ಮಣ ಕುಲಾಲ್ ಆನಡ್ಕ, ಜಗದೀಶ ಕೆರೆಕೋಡಿ, ಶಿವರಾಮ ಭಟ್ ವಳಂಗಜೆ(ಸಾಮಾನ್ಯ) ಹಾಗೂ ಸಾಲಗಾರರಲ್ಲದ ಸ್ಥಾನದಿಂದ ಪದ್ಮನಾಭ ಭಟ್ ಬಿ. ಚುನಾವಣೆಯಲ್ಲಿ ಜಯಗಳಿಸಿದರು.
ಈ ಮೈತ್ರಿ ಕೂಟದಿಂದ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಮೊಹಮ್ಮದ್ ಗಾಂಧಿನಗರ (ಹಿಂ. ಎ ವರ್ಗ – ಅವಿರೋಧ ಆಯ್ಕೆ), ಶರೀಫ್ ತಾಳಿಪಡ್ಪು (ಸಾಮಾನ್ಯ) ಆಯ್ಕೆ ಆಗುವ ಮೂಲಕ ಮೈತ್ರಿ ಕೂಟವು ಎಲ್ಲ 12 ಸ್ಥಾನಗಳನ್ನೂ (ಬಿಜೆಪಿ ಕಾರ್ಯಕರ್ತರು 10, ಕಾಂಗ್ರೆಸ್ 2) ಪಡೆದುಕೊಂಡಿತು.
ಪರಾಜಿತ ತಂಡದ ಅಭ್ಯರ್ಥಿಗಳು – ಚೆನ್ನಪ್ಪ ಗೌಡ ಕುದುಮಾನು (ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಾಜಿ ನಿರ್ದೇಶಕರು), ರಾಮಣ್ಣ ಗೌಡ ಕುದುಮಾನು (ಮಾಜಿ ನಿರ್ದೇಶಕರು), ಕೇಶವ ನಾಯ್ಕ ಬಡೆಕ್ಕಿಲ (ಮಾಜಿ ನಿರ್ದೇಶಕರು), ಚಂದ್ರಶೇಖರ ಕುಲಾಲ್ ಕುಕ್ಕಾಜೆ (ಶಕ್ತಿಕೇಂದ್ರ ಸಂಚಾಲಕರು), ಕೃಷ್ಣಪ್ಪ ಪೂಜಾರಿ ಗಾಂಧಿನಗರ, ಮಾರಪ್ಪ ಸುವರ್ಣ ಪೇರಮೊಗ್ರು, ರಾಜಶ್ರೀ ಮುರಳೀಧರ ಶೆಟ್ಟಿ ಕಲ್ಲಾಜೆ, ಪ್ರಿಯಶ್ರೀ ರಾಧಾಕಷ್ಣ ಗೌಡ ವಳಂಕುಮೇರಿ.
ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ, ಸಿಬ್ಬಂದಿಗಳಾದ ರಮೇಶ ವಿ, ಮಿಥುನ್ ಕುಮಾರ್, ಹಮೀದ್ ಸಹಕರಿಸಿದರು. ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಯೋಗೀಶ್ ಹೆಚ್. ಉಪಸ್ಥಿತರಿದ್ದರು.