ಎಣ್ಮೂರು: ಪ್ರತಿಷ್ಠಿತ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಜ.17 ರಂದು ಚುನಾವಣೆ ನಡೆಯಲಿದೆ.
ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಸಾಮಾನ್ಯ ಕ್ಷೇತ್ರದಿಂದ ರೂಪರಾಜ ರೈ, ರಾಜೇಂದ್ರ ಪ್ರಸಾದ್ ಶೆಟ್ಟಿ, ವಸಂತ ಹೆಚ್.ಕೆ.ಹೇಮಳ, ನಾಗೇಶ್‍ಆಳ್ವ ಕೆ., ಅನೂಪ್ ಬಿಳಿಮಲೆ, ನೇಮಿಶ ಕಡೀರ, ಹಿಂದುಳಿದ ವರ್ಗ ಪ್ರವರ್ಗ ಬಿ ಯಿಂದ ವಸಂತ ನಡುಬೈಲು, ಶಿವರಾಮ ಸಿ., ಪರಿಶಿಷ್ಟ ಜಾತಿಯಿಂದ ಮುತ್ತಪ್ಪ ಎಸ್., ಮಹಿಳಾ ಮೀಸಲಾತಿಯಿಂದ ಸುಧಾರಾಣಿ ಕಡೀರ, ನವ್ಯಶ್ರೀ ಕೆ.ಬಿ. ಅಲೆಂಗಾರ ಸ್ಪರ್ಧಿಸಲಿದ್ದಾರೆ.
25 ವರ್ಷಗಳಿಂದ ಸಹಕಾರಿಗಳಿಗಾಗಿ, ಸಹಕಾರಿಗಳಿಂದ ಮತ್ತು ಸಹಕಾರಿಗಳಿಗೋಸ್ಕರ ಎಂಬ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಆಡಳಿತ ಮಂಡಳಿ ಅಧಿಕಾರದಲ್ಲಿದ್ದು ಭವ್ಯ ಹಿನ್ನಲೆಯುಳ್ಳ ಎರಡು ಗ್ರಾಮಗಳ ಒಳಪಟ್ಟ ಮುರುಳ್ಳ – ಎಣ್ಣೂರು ಸಹಕಾರಿ ಸಂಘ ದಾಖಲೆಯ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಸತತ 6 ವರ್ಷಗಳಿಂದ ಸಂಘದ ಪ್ರಗತಿ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ‘ಸಾಧನ ಪ್ರಶಸ್ತಿ;’, 15 ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ ಗ್ರೇಡ್ ಲಭಿಸಿರುತ್ತದೆ. ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದೊಂದಿಗೆ ರಾಜಿ ಇಲ್ಲದೆ ಶೂನ್ಯ ಸಹನೆಯಿಂದ ಹಾಗೂ ನಿಸ್ವಾರ್ಥ ಭಾವದಿಂದ ಮತ್ತು ಯಾವುದೇ ಫಲಾಪೇಕ್ಷೆ ಇಲ್ಲದೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಿರುವುದು ಸಂಘದ ಅಭಿವೃದ್ಧಿಗೆ ಕಾರಣವಾಗಿದೆ. ನಮ್ಮ ಗತ ಸಾಧನೆಗಳ ಮೆಲುಕಿನೊಂದಿಗೆ ಭವಿಷ್ಯದ ಕಾರ್ಯಸೂಚಿಗಳ ಅನುಷ್ಠಾನಕ್ಕಾಗಿ ಜ.17 ರಂದು ಮುಂದಿನ ಐದು ವರ್ಷಗಳ ಅವಧಿಗೆ ನಡೆಯಲಿರುವ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಯಲಿದೆ.
ಸುಳ್ಯ ಹಾಗೂ ಕಡಬ ತಾಲೂಕುಗಳ ಕೇಂದ್ರ ಪ್ರದೇಶವಾದ ನಿಂತಿಕಲ್ಲಿನ ಹೃದಯ ಭಾಗದಲ್ಲಿ 20 ಸೆಂಟ್ಸ್ ಜಾಗವನ್ನು ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳು, ಹಿರಿಯ ಸಹಕಾರಿಗಳ, ಜನಪ್ರತಿನಿಧಿಗಳ ಸಹಕಾರದಿಂದ ಮಂಜೂರು ಮಾಡಿಸಿಕೊಂಡು ಎರಡು ತಾಲೂಕುಗಳಲ್ಲಿ ಮಾದರಿಯಾಗಿರುವ ಸುಸಜ್ಜಿತವಾದ ಕಟ್ಟಡ ನಿರ್ಮಾಣ, ಸಂಘದ ಕೇಂದ್ರ ಕಚೇರಿ ಸುಸಜ್ಜಿತವಾದ ಹದಿನೆಂಟು ವಾಣಿಜ್ಯ ಕೋಣೆಗಳು ಬಾಡಿಗೆಗೆ ನೀಡಲಾಗಿದೆ. ಕೃಷಿಕರ ಅನುಕೂಲಕ್ಕಾಗಿ ಅಡಿಕೆ ಹಾಗೂ ಕೃಷಿ ಉತ್ಪನ್ನಗಳ ಸುಸಜ್ಜಿತವಾದ ದಾಸ್ತಾನು ಕೇಂದ್ರ, ಮಾಸ್ ಅಡಿಕೆ ಸಂಸ್ಥೆಯಿಂದ ಅಡಿಕೆ ಖರೀದಿ ಕೇಂದ್ರ, ರಾಸಾಯನಿಕ ಹಾಗೂ ಸಾವಯವ ಗೊಬ್ಬರಗಳನ್ನು ಅನುಕೂಲಕರವಾದ ದರದಲ್ಲಿ ನೀಡಲು ವ್ಯವಸ್ಥೆ ವ್ಯವಸ್ಥಿತವಾದ ಗೊಬ್ಬರ ದೇವಸ್ಥಾನ ಕೇಂದ್ರ, ಮುಂದೆ ಕಟ್ಟಡದ ವಸತಿ ಸಮುಚ್ಚಾದ ಮೇಲೆ ಇರುವ ಅಪೂರ್ಣಗೊಂಡಿರುವ ಸಭಾಭವನವನ್ನು ಸಜ್ಜಿತವಾಗಿ ಎಲ್ಲಾ ಸೌಕರ್ಯಗಳೊಂದಿಗೆ ಪೂರ್ಣಗೊಳಿಸುವುದು, ಎಣ್ಣೂರು ಪ್ರದೇಶದಲ್ಲಿ ರಾಜ್ಯ ರಸ್ತೆಯ ಪಕ್ಕದಲ್ಲಿ ಜಾಗ ಖರೀದಿ ಮಾಡಿ ಸುಸಜ್ಜಿತವಾದ ಕಟ್ಟಡ ನಿರ್ಮಿಸುವುದು ಸಂಘದ ಆಶಯವಾಗಿದೆ.