ಉಪ್ಪಿನಂಗಡಿ : ಶ್ರೀಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘ ಉಪ್ಪಿನಂಗಡಿ 50ರ ಸಂಭ್ರಮದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 60 ನೇ ಕಾರ್ಯಕ್ರಮವಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸತಿ ಚಿತ್ರಾoಗದಾ ತಾಳಮದ್ದಳೆ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ ರಾವ್. ಬಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣಾಯ, ಅರ್ಥಧಾರಿಗಳಾಗಿ ಶ್ರೀಧರ ಎಸ್ಪಿ ಸುರತ್ಕಲ್ ( ಚಿತ್ರವಾಹನ ), ಪ್ರದೀಪ ಚಾರ( ಶ್ರೀಕೃಷ್ಣ ), ಸತೀಶ್ ಶಿರ್ಲಾಲು( ದುರ್ಜಯ, ದಿವಾಕರ ಆಚಾರ್ಯಗೇರುಕಟ್ಟೆ( ಚಿತ್ರಾಂಗದಾ), ಹರೀಶ್ ಆಚಾರ್ಯ ಬಾರ್ಯ(ಅರ್ಜುನ), ತಿಲಕಾಕ್ಷ (ವಿಕಟ), ಪೂರ್ಣಿಮಾ(ಉಲೂಪಿ), ಶ್ರುತಿ ವಿಸ್ಮಿತ್( ಘಟೋತ್ಕಚ, ಬಬ್ರುವಾಹನ) ಭಾಗವಹಿಸಿದ್ದರು.
ಕಾರ್ಕಳ ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಗೋಪಾಲಕೃಷ್ಣ ಗೋರೆ ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ.
ಶ್ರದ್ದಾಂಜಲಿ ಅರ್ಪಣೆ
ನಿವೃತ್ತಅಧ್ಯಾಪಕ, ತಾಳಮದ್ದಳೆ ಅರ್ಥದಾರಿ ಪಕಳಕುಂಜ ಶಾಮ್ ಭಟ್ ನಿಧನರಾದ ಬಗ್ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಹರಿಶ್ಚಂದ್ರ ಆಚಾರ್ಯ ಬಾರ್ಯ ನುಡಿನಮನ ಸಲ್ಲಿಸಿದರು. ಉಪ್ಪಿನಂಗಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಪುಳಿತ್ತಡಿ, ಹರೀಶ್ ಆಚಾರ್ಯ ಮದ್ದಡ್ಕ ಉಪಸ್ಥಿತರಿದ್ದರು.