ಪುತ್ತೂರು: ಧೀಶಕ್ತಿಗೆ ಇನ್ನೊಂದು ಉದಾಹರಣೆ ಯಾಗಿರುವ ನರೇಂದ್ರ ನಮ್ಮ ವಿವೇಕಕ್ಕೆ ಆನಂದ ನೀಡುವ ಅನರ್ಘ್ಯ ರತ್ನ ಎಂದು ಎ.ವಿ.ಜಿ ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕ ಎ.ವಿ.ನಾರಾಯಣ ಹೇಳಿದರು.
ಅವರು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಆಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈ ಗೂಡಿಸುವ ನಿಟ್ಟಿನಲ್ಲಿ ಹೇಗೆ ಪ್ರಯತ್ನಗಳನ್ನು ಮಾಡಬಹುದು ಎಂದು ವಿವರಿಸಿದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷೆ ನವ್ಯ, ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿಗಳಾದ ಹರೀಶ್ ಆಚಾರ್ಯ, ವೆಂಕಟ್ರಮಣ, ಹರ್ಷ ಗುತ್ತು, ಸೋಮಶೇಖರ, ಶಾಂತರಾಮ, ಸುರೇಶ್ ಗಂಡಿ, ರಮೇಶ್, ಅರ್ಚನಾ, ಅನುಪಮಾ, ಚಂದ್ರಾವತಿ, ಜಯಪ್ರಕಾಶ್, ಶಿಕ್ಷಕರಾದ ಶ್ರೀಲತಾ, ಶಿಲ್ಪರಾಣಿ, ಸೌಮ್ಯ, ಸುಮಿತ್ರಾ ಉಪಸ್ಥಿತರಿದ್ದರು.