ಮಂಗಳೂರು: ಮೂಡುಶೆಡ್ಡೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಪಿಫ್ಐ ಮುಖಂಡ ಬದ್ರುದ್ದೀನ್ ಅಕ್ರಮ ಪಿಸ್ತೂಲಿನಿಂದ ಗುಂಡು ಹರಿಸಿದ ಪರಿಣಾಮ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಅಕ್ರಮವಾಗಿ ಪಿಸ್ತೂಲು ಮದ್ದುಗುಂಡುಗಳನ್ನು ಇಟ್ಟುಕೊಂಡು ಹಿಂದುಗಳ ಮತ್ತು ಹಿಂದೂ ಮುಖಂಡರ ಕೊಲೆಗೆ ಸಂಚು ರೂಪಿಸಿತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಪಿಎಫ್ ಐ ಸಂಘಟನೆಯನ್ನು ಇಂತಹದ್ದೇ ಕಾರಣಕ್ಕಾಗಿ ನಿಷೇದಿಸಿದ್ದು ಅಲ್ಲದೆ ಇದರ ಮುಖಂಡರು ಅಕ್ರಮ ಪಿಸ್ತೂಲು ಹೊಂದಿರುವುದು ಇಡೀ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಈ ಕುರಿತು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಪತ್ರಿಕಾ ಹೇಳಿಕೆ ನೀಡಿ ಆಗ್ರಹಿಸಿದ್ದಾರೆ.
ಮಂಗಳೂರು ಸೇರಿದಂತೆ ಕರಾವಳಿ ಉಗ್ರರಿಗೆ ಭಯೋತ್ಪಾದಕ ಚಟುವಟಿಕೆಗಳ ಪ್ರಯೋಗಶಾಲೆಯಾಗುತ್ತಿದ್ದು, ಇದರ ಹಿಂದೆಯೂ ದೀಪ್ತಿ ಮಾರ್ಲ ಪ್ರಕರಣ ಮತ್ತು ಮಂಗಳೂರಿನಲ್ಲಿ ಕೆಲವೆಡೆ ಎನ್ ಐಎ ದಾಳಿ ನಡೆಸಿದಾಗ ನಮ್ಮ ಸಂಘಟನೆ ಎನ್ ಐಎ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಮನವಿ ಮಾಡಿದೆ. ಸಂಸದರು ಇದರ ಬಗ್ಗೆ ಪ್ರಯತ್ನಿಸುತ್ತಿದ್ದು, ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎನ್ ಐಎ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.