ಸಾಲಭಾದೆಯಿಂದ ಯುವಕ ಆತ್ಮಹತ್ಯೆ

ಮೂಡಬಿದಿರೆ : ಸಾಲ ಭಾದೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ.

ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಸ್ರುಲ್ಲಾ ಎಂಬುವವರು  ಮೂರು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಈ ವೇಳೆ ಸಾಲದ ಚಿಂತೆಯಲ್ಲಿದ್ದರೆನ್ನಲಾಗಿದೆ.































 
 

ಮನೆಯಲ್ಲಿದ್ದ ಸಮಯದಲ್ಲಿ ಸಾಲ ಕೊಟ್ಟ ಬ್ಯಾಂಕ್ ನವರು, ಸಾಲದವರು ಆತನ ಮನೆಗೆ ಬಂದು ಹೋಗುತ್ತಿದ್ದರೆನ್ನಲಾಗಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದರು. ಬುಧವಾರ ಬೆಡ್ ರೂಂನಲ್ಲಿ ಫ್ಯಾನಿಗೆ ಚೂಡಿದಾರದ ವೇಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನ ವಿಚಾರವಾಗಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top