ಪುತ್ತೂರು: ಒಕ್ಕಲಿಗ ಸ್ಮ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ನಡೆದ ಅದೃಷ್ಟ ಕೂಪನ್ ವಿಜೇತರಿಗೆ ಬಹುಮಾನವನ್ನು ಬುಧವಾರ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಒಕ್ಕಲಿಗ ಸೌಧದಲ್ಲಿ ವಿತರಿಸಲಾಯಿತು.
ಪ್ರಥಮ ಬಯಮಾನ ಚಿನ್ನದ ಸರ ವಿಜೇತರರಾದ ಅರ್ಪಣಾ, ಚಿನ್ನದ ನಾಣ್ಯ ವಿಜೇತರಾದ ಗಿರಿಜಾ, ಮೊಬೈಲ್ ಪೋನ್ ವಿಜೇತರಾದ ಆಕಾಶ್, ಟ್ಯಾಬ್ ಬಹುಮಾನ ವಿಜೇತರಾದ ಜಿತಿನ್ ಹಾಗೂ ಹತ್ತು ಆಕರ್ಷಕ ಬಹುಮಾನಗಳಿಗೆ ವಿಜೇತರಾದ ಮೀನಾಕ್ಷಿ ಪುಷ್ಪಲತಾ ಕುಂಟ್ಯಾನ, ಜಾನಕಿ ನಾಯ್ಕಟ್ಟು, ಪರ್ಣವಿ ಕೆ ಆರ್., ಕುಸುಮ, ಭುವಿ ಆರ್. ಕೈಲಾಜೆ, ದಿವ್ಯಾ ಕುಂಟ್ಯಾನ, ನಿಖಿಲ್, ಸುನೀತಾ, ಜಯರಾಮ ಅವರುಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕಲಿಗ ಸ್ಮ ಸಹಾಯ ಟ್ರಸ್ಟ್ ಅಧ್ಯಕ್ಷ ಡಿ ವಿ ಮನೋಹರ್, ಸ್ಥಾಪಕಾಧ್ಯಕ್ಷ ಎ.ವಿ. ನಾರಾಯಣ, ಪ್ರಧಾನ ಕಾರ್ಯದರ್ಶಿ ದಿವ್ಯ ಪ್ರಸಾದ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಕಾರ್ಯದರ್ಶಿ ಹೂವಪ್ಪ ಗೌಡ ಪರ್ಪುಂಜ, ಟ್ರಸ್ಟ್ ಸಲಹಾ ಸಮಿತಿ ಸದಸ್ಯರಾದ ಚಿನ್ನಪ್ಪ ಗೌಡ ಮಲುವೇಳು, ವಿವಾಹ ವೇದಿಕೆ ಸಂಚಾಲಕ ಸುರೇಶ್ ಗೌಡ ಕಲ್ಲಾರೆ, ಮೆನೇಜರ್ ಸುನಿಲ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.