ನಗರಸಭೆ 15ನೇ ಹಣಕಾಸು ಯೋಜನೆಯ ಇಂಟರ್ ಲಾಕ್ ರಸ್ತೆ, ಚರಂಡಿ ಕಾಮಗಾರಿ ಉದ್ಘಾಟನೆ

ಪುತ್ತೂರು : ನಗರಸಭೆ ವ್ಯಾಪ್ತಿಯ ಉರಮಾಲ್ ಸಿದ್ಧಾಳ ಮತ್ತು ಶಾಂತಿನಗರ ತಾರಿಗುಡ್ಡೆ ರಸ್ತೆಯಲ್ಲಿ  ನಗರಸಭೆಯ15ನೇ ಹಣಕಾಸು ಯೋಜನೆಯಡಿ 6 ಲಕ್ಷ ರೂ. ವೆಚ್ಚದಲ್ಲಿ ಇಂಟರ್ಲಾಕ್ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಮಂಗಳವಾರ ಸಂಜೆ ಲೋಕಾರ್ಪಣೆ ಮಾಡಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು ರಸ್ತೆ ಉದ್ಘಾಟಿಸಿ ಮಾತನಾಡಿ, ಪುತ್ತೂರು ನಗಸಭೆಯಲ್ಲಿ ಒಂದು ಪರಿವರ್ತನೆ ಅಭಿವೃದ್ಧಿ ಕಾಣುತ್ತಿದ್ದು, ಕಳೆದ 5 ವರ್ಷ ಆಡಳಿತ ಮಾಡಿದ ಬಿಜೆಪಿ ನಗರವಾಸಿಗಳು ಮತ್ತು ಗ್ರಾಮವಾಸಿಗಳಿಗೆ ಯಾವುದೇ ಬೇಧವಿಲ್ಲದೆ ಸರ್ವಾಂಗೀಣ ಅಭಿವೃದ್ಧಿ ಮಾಡುವ ಕೆಲಸ ಮಾಡಿದೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರ ಮೂಲಕ ಇಂದು ಪುತ್ತೂರು ನಗರಸಭೆಯಲ್ಲಿ ನಗರೋತ್ಮಾನದ ಅನುದಾನ, ಎಸ್ಎಫ್ಸಿ ಅನುದಾನ, 15ನೇ ಹಣುಕಾಸಿನ ಅನುದಾನ, ನಗರಸಭೆಯ ನಿಧಿ ಸಹಿತ ಬೇರೆ ಬೇರೆ ಅನುದಾನದಿಂದ ನಗರಸಭೆಯ ಪ್ರತಿಯೊಂದು ಭಾಗದ ರಸ್ತೆ ಕಾಂಕ್ರೀಟಿಕರಣ ಗೊಂಡಿದೆ. ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಥಾರ್ ರಸ್ತೆ ಇರುವುದಿಲ್ಲ ಬದಲಾಗಿ ಕಾಂಕ್ರೀಟ್ ರಸ್ತೆಗಳೇ ಮೂಡಿ ಬರಲಿದೆ ಅದು ನಮ್ಮ ಗ್ಯಾರೆಂಟಿ ಎಂದರು.

ಸ್ಥಳೀಯ ವಾರ್ಡ್ ಸದಸ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ಕೇಪುಳು ಸಿದ್ಧಾಳ ರಸ್ತೆ ಬಹಳ ಹದೆಗೆಟ್ಟಿತ್ತು. ಜನರಿಂದ ಬೈಗುಳವೂ ಸಿಕ್ಕಿತ್ತು. ಆದರೆ ಇದು ನಮಗೆ ಬೇಸರ ತಂದಿತ್ತು. ಆದರೆ ನಾನು ಕೇವುಳುವಿನಿಂದ ಸಿದ್ಧಾಳದ ತನಕ ಒಂದೇ ರಸ್ತೆಗೆ  ರೂ. 1.15 ಕೋಟಿ ಅನುದಾನ ತರಿಸಿದ್ದೇನೆ. ಇನ್ನು ಉಳಿದ ರಸ್ತೆಗೂ ಅನುದಾನ ತರಿಸುತ್ತೇನೆ. ಈ ಅನುದಾನ ತರಿಸಲು ಕಾರಣಕರ್ತರಾದ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.































 
 

ನಗರಸಭೆ ಅಧ್ಯಕ್ಷೆ ಲೀಲವಾತಿ ಅಣ್ಣು ನಾಯ್ಕ ಉಪಾಧ್ಯಕ್ಷ ಬಾಲಚಂದ್ರ ಮಾತನಾಡಿದರು. ಈ ಸಂದರ್ಭ ನಗರಸಭೆ ಸದಸ್ಯರಾದ ಗೌರಿ ಬನ್ನೂರು, ದೀಕ್ಷಾ ಪೈ, ಮಾಜಿ ಸದಸ್ಯ ಇಸ್ಮಾಯಿಲ್ ಸಾಲ್ಮರ, ಬನ್ನೂರು ಗ್ರಾ.ಪಂ ಸದಸ್ಯ ತಿಮ್ಮಪ್ಪ ಮೂಡಾಯೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಪ್ರಸಾದ್, ಬಿಜೆಪಿ ಪ್ರಮುಖರಾದ ಜಯಲಕ್ಷ್ಮೀ, ಸ್ವರ್ಣಲತಾ ಹೆಗ್ಡೆ, ಯುವರಾಜ್ ಪರಿಯತ್ತೋಡಿ, ಸಹಕಾರ ಭಾರತಿಯ ಕಾರ್ಯದರ್ಶಿ ಮೋಹನ್ ಪಕಳ, ನಾಗೇಶ್ ಟಿ.ಎಸ್, ರೈಲ್ವೇ ಬಳಿಯ ಅಬ್ದುಲ್ಲಾ, ಸ್ಥಳೀಯರಾದ ರಾಫಿ, ನಾರಾಯಣ, ಕೇಶವ, ಶಿವಪ್ರಸಾದ್: ಸುವರ್ಣ, ರಮೇಶ್ ತಾರಿಗುಡ್ಡೆ, ಶಿವಾನಂದ, ರವೀಶ್, ಸುಂದರ, ಪುರುಷೋತ್ತ, ದಯಾನಂದ ಸಹಿತ ಹಲವಾರು ಮಂದಿ ಉಪಸ್ಥಿರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top