ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಉದ್ಯೋಗ ಕೌಶಲ್ಯ ಸಂಸ್ಥೆಯಾಗಿರುವ ಪುತ್ತೂರು ವಿದ್ಯಾಮಾತಾ ಅಕಾಡೆಮಿಯಲ್ಲಿ 2025 ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಹೊಸ ಬ್ಯಾಚ್ ಗಳನ್ನು ಉದ್ಘಾಟಿಸಲಾಯಿತು.
ಲಯನ್ಸ್ ವಲಯ-1 ರ ವಲಯ ಅಧ್ಯಕ್ಷ, ಅಲಂಕಾರು ದುರ್ಗಾಂಬಾ ವಿದ್ಯಾ ಸಂಸ್ಥೆ ಸಂಚಾಲಕ ದಯಾನಂದ ರೈ ಮನವಳಿಕೆ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಹಾಜಿ ಕುಕ್ಕುವಳ್ಳಿ ತರಬೇತಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ದಯಾನಂದ ರೈ ಮನವಳಿಕೆಯವರು ಬಹುಮಾನವನ್ನು ವಿತರಿಸಿದರು. ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಿದ್ಯಾಮಾತಾ ಅಕಾಡೆಮಿಯಲ್ಲಿ ಎಫ್.ಡಿ.ಎ., ಎಸ್.ಡಿ.ಎ., ಪಿ .ಡಿ.ಓ. ವಿ.ಎ.ಓ., ಬ್ಯಾಂಕಿಂಗ್ ಕಾರ್ಪೊರೇಟಿವ್, ರೈಲ್ವೆ ಎಸ್ಎಸ್ಸಿ, ಪೊಲೀಸ್, ಫಾರೆಸ್ಟ್, ಸೇರಿದಂತೆ ಹತ್ತಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರು ತಿಂಗಳ ಅವಧಿಯಲ್ಲಿ ಏಕಕಾಲದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಅಲ್ಲದೆ ತರಬೇತಿ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ, ದೈಹಿಕ ಸದೃಢತೆಗೆ ಉಚಿತ ಮೈದಾನ ತರಬೇತಿ, ಉಚಿತ ಅರ್ಜಿ ಸಲ್ಲಿಕೆ ಮಾಹಿತಿ, ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿಗಳನ್ನು ನೀಡಲಾಗುತ್ತಿದೆ. ಸಿ.ಎಸ್.ಆರ್. ವಿದ್ಯಾರ್ಥಿ ವೇತನ ಯೋಜನೆಯ ಮೂಲಕ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಇರುವ ವಿದ್ಯಾರ್ಥಿಗಳಿಗೆ ರೂಪಾಯಿ 6000 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಅಲ್ಲದೆ ಟಾಕ್ಸೇಷನ್, ಗ್ರಾಫಿಕ್ ಡಿಸೈನ್, ವಿ.ಎಫ್.ಎಕ್ಸ್ ., ಸ್ಯಾಪ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಬೇತಿಗಳನ್ನು ವಿದ್ಯಾಮಾತಾದಲ್ಲಿ ಪಡೆದುಕೊಳ್ಳಬಹುದು.
ಕಾರ್ಯಕ್ರಮದಲ್ಲಿ ವಿದ್ಯಾಮಾತಾದ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿ. ಪ್ರಾಸ್ತವಿಕವಾಗಿ ಮಾತನಾಡಿದರು.. ತರಬೇತುದಾರೆ ಚೇತನಾ ಸತೀಶ್ ನಿರ್ವಹಿಸಿದರು. ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ವಂದಿಸಿದರು. ವಿದ್ಯಾರ್ಥಿನಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸ್ನೇಹ, ರಮ್ಯ, ಸ್ವಾತಿ, ಕೀರ್ತಿ, ಮತ್ತು ಮಿಥುನ್ ಉಪಸ್ಥಿತರಿದ್ದರು. ಸಶಸ್ತ್ರ ಪಡೆಗಳಿಗೆ ತರಬೇತಿ ಪಡೆಯುವ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.