ಉತ್ತರ ಭಾರತ, ನೇಪಾಳ, ಚೀನದಲ್ಲೂ ಕಂಪನದ ಅನುಭವ
ಹೊಸದಿಲ್ಲಿ : ಟಿಬೆಟ್‌ನಲ್ಲಿ ಇಂದು ಬೆಳಗ್ಗೆ ಒಂದು ತಾಸಿನೊಳಗೆ ಬೆನ್ನುಬಿನ್ನಿಗೆ 6 ಭೂಕಂಪಗಳು ಸಂಭವಿಸಿ ಅಪಾರ ಹಾನಿ ಉಂಟಾಗಿದೆ. ಈ ಪೈಕಿ ಮೊದಲ ಭೂಕಂಪ 7.1 ತೀವ್ರತೆ ಹೊಂದಿತ್ತು. ನಂತರ ಐದು ಪಶ್ಚಾತ್ ಕಂಪನಗಳು ಸಂಭವಿಸಿವೆ. ಭಾರತ, ನೇಪಾಳ, ಭೂತಾನ್ ಮತ್ತು ಚೀನದಲ್ಲೂ ಬೆಳಗ್ಗೆ ಕಂಪನದ ಅನುಭವ ಆಗಿದೆ.
ಭೂಕಂಪದಿಂದಾಗಿ ಟಿಬೆಟ್‌ನಲ್ಲಿ ಅನೇಕ ಕಟ್ಟಡಗಳು ಉರುಳಿದ್ದು, ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ. ಪರಿಹಾರ ಕಾರ್ಯಾಚರಣೆ ಶುರುವಾಗಿದ್ದು, ಅವಶೇಷಗಳನ್ನು ಎತ್ತಿದಾಗ ಸಾವುನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಿಲ್ಲಿ, ಪಟ್ನಾ ಸೇರಿದಂತೆ ಉತ್ತರ ಭಾರತದ ಹಲವೆಡೆ ಜನರಿಗೆ ಬೆಳಗ್ಗೆ ಭೂಕಂಪದ ಅನುಭವಾಗಿದೆ. ಮಂಗಳವಾರ ಬೆಳಿಗ್ಗೆ 6.30ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ನೇಪಾಳದಲ್ಲೂ ಕಂಪನದಂಇ ಹಾನಿ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಟಿಬೆಟ್-ನೇಪಾಳ ಗಡಿ ಪ್ರದೇಶದಲ್ಲಿ ಕಂಪನ ಕೇಂದ್ರವಿತ್ತು. ಇದರ ಸುತ್ತಮುತ್ತ ಅನೇಕ ಕಟ್ಟಡಗಳು ಧರೆಗುರುಳಿವೆ. ನೇಪಾಳದ ಕಾಠ್ಮಂಡುವಿನಲ್ಲಿ ಜನರು ಕಂಪನದಿಂದ ಭೀತಿಗೊಂಡು ರಸ್ತೆಗೋಡಿ ಬಂದಿದ್ದಾರೆ. ನೇಪಾಳ-ಟಿಬೆಟ್ ಗಡಿಯ ಕ್ಸಿಂಗ್ ಪ್ರಾಂತ್ಯದ ಡಿಂಗ್ರಿಯಲ್ಲಿ ಕಂಪನದ ಕೇಂದ್ರವಿತ್ತು. ಹೀಗಾಗಿ ನೇಪಾಳ ಮತ್ತು ಟಿಬೆಟ್ ಎರಡೂ ದೇಶಗಳಲ್ಲಿ ಬಲವಾದ ಕಂಪನ ಉಂಟಾಗಿದೆ. ನೇಪಾಳ ಮತ್ತು ಟಿಬೆಟ್ ಗಡಿಭಾಗದ ಲೋಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ ದೂರದಲ್ಲಿ ಈ ಭೂಕಂಪ ಸಂಭವಿಸಿದ್ದು. ಕಠ್ಮಂಡು ಹಾಗೂ ಸುತ್ತಮುತ್ತಲಿನ ಪ್ರದೇಶದ ಜಿಲ್ಲೆಗಳಲ್ಲಿ ತೀವ್ರ ಭೂಕಂಪನದ ಅನುಭವವಾಗಿದೆ.