ಉಪ್ಪಿನಂಗಡಿ : 34 ನೆಕ್ಕಿಲಾಡಿಯ ಬಿಜೆಪಿ ಶಕ್ತಿ ಕೇಂದ್ರವು ಶೀಘ್ರ ಡಾಮರು ಕಾಮಗಾರಿಗೆ ಒತ್ತಾಯಿಸಿ ಜ.8ರಂದು ಹಮ್ಮಿಕೊಂಡಿದ್ದ ರಸ್ತೆ ತಡೆಯನ್ನು ರದ್ದುಗೊಳಿಸಲಾಗಿದೆ.
31ನೇ ನೆಕ್ಕಿಲಾಡಿ ಬೊಳುವಾರು ರಾಜ್ಯ ಹೆದ್ದಾರಿಯ 31 ನೆಕ್ಕಿಲಾಡಿಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣದ ಡಾಮರು ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ 34 ನೆಕ್ಕಿಲಾಡಿಯ ಬಿಜೆಪಿ ಶಕ್ತಿ ಕೇಂದ್ರವು ಶೀಘ್ರ ಡಾಮರು ಕಾಮಗಾರಿಗೆ ಒತ್ತಾಯಿಸಿದೆ ಇದರಿಂದ ಜ.8 ರಂದು ನಡೆಯಬೇಕಾದ ರಸ್ತೆ ತಡೆಯನ್ನು ರದ್ದುಗೊಳಿಸಲಾಗಿದೆ.
ಕಳೆದ ಡಿ.2ರಂದು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಹೆದ್ದಾರಿ ಕಾಮಗಾರಿಯ ವಿಳಂಬವನ್ನು ಖಂಡಿಸಿ ಆದರ್ಶನಗರದಲ್ಲಿ ರಸ್ತೆ ತಡೆ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿತ್ತು.
ಆ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪಿಡಬ್ಲೂಡಿ ಇಲಾಖೆಯ ಎಂಜಿನಿಯರ್ 15 ದಿನದ ಗಡುವು ಕೇಳಿದ್ದು, ಪ್ರತಿಭಟನೆ ನಡೆದು ಒಂದು ತಿಂಗಳಾದರೂ ಡಾಮರು ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಬಿಜೆಪಿಯು ಜ.3ರಂದು 31 ನೆಕ್ಕಿಲಾಡಿ ವ್ಯಾಪ್ತಿಯ ಬೊಳಂತಿಲ ಬೇರಿಕೆ ತನಕದ ಚತುಷ್ಪಥ ಹೆದ್ದಾರಿ ಕಾಮಗಾರಿ ವಿಳಂಬ ಖಂಡಿಸಿ ಆದರ್ಶನಗರದಲ್ಲಿ ಮತ್ತೆ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಹೆದ್ದಾರಿಯ ಡಾಮರು ಕಾಮಗಾರಿ ಜ.೧ರಂದು ಆರಂಭಗೊಂಡಿರುವ ಕಾರಣ ಬಿಜೆಪಿ ನಾಳೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಿದೆ.
31 ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರವು ಮನವಿಗೆ ಸ್ಪಂದಿಸಿ ಡಾಮರು ಕಾಮಗಾರಿಗೆ ಮುಂದಾದ ಪಿಡಬ್ಲೂಡಿ ಇಲಾಖಾಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಅಭಿನಂದನೆ ಸಲ್ಲಿಸಿದೆ.