ಪುತ್ತೂರು : ಹೊಸ ಮನೆ ಕ್ರಿಕೆಟರ್ಸ್ (ರಿ)ಪುತ್ತೂರು ಪ್ರಸ್ತುತಪಡಿಸುವ ಅರ್ಯಾಪು ಪ್ರೀಮಿಯರ್ ಲೀಗ್ 2025 ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಎಪಿಎಲ್ ಪ್ಲೇಯರ್ ಆಕ್ಷನ್ 2025 ಜ. 5ರಂದು ಮಹಾವೀರ ಹೋಟೆಲ್ ಆ್ಯಂಡ್ ರೆಸಾರ್ಟ್ ಪುತ್ತೂರಿನಲ್ಲಿ ನಡೆಯಿತು.
ಪುತ್ತೂರಿನ ವಾಣಿಜ್ಯೋದ್ಯಮಿ ಸಹಜ ರೈ ಬಳಜ್ಜ, ವಿಟಿವಿ ವಿಟ್ಲ ಆಡಳಿತ ನಿರ್ದೇಶಕರಾಗಿರುವ ರಾಮದಾಸ್ ಶೆಟ್ಟಿ ಹಾಗೂ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡಂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು ಮತ್ತು ಆಮಂತ್ರಣ ಪತ್ರಿಕೆ ಯನ್ನು ಬಿಡುಗಡೆ ಗೊಳಿಸಿದರು.
ಬಳಿಕ ಫೆಬ್ರವರಿ 8 ಮತ್ತು 9ರಂದು ಕ್ರಿಕೇಟ್ ಪಂದ್ಯಾಟ ನಡೆಯಲಿದೆ.. ರಾತ್ರಿ 9ರಂದು ಅರ್ಯಾಪು ಮ್ಯೂಸಿಕಲ್ ನೈಟ್ ಜರುಗಲಿದೆ ಎಂದು ಹೊಸಮನೆ ಕ್ರಿಕೆಟರ್ಸ್ ನ ಅಧ್ಯಕ್ಷ ಧನುಷ್ ಹೊಸಮನೆ ತಿಳಿಸಿದ್ದಾರೆ
ಗೌರವ ಅತಿಥಿಗಳಾಗಿ 10 ತಂಡದ ಮಾಲಕರು ಉಪಸ್ಥಿತರಿದ್ದರು. ಸಂಪ್ಯ ವಿಷ್ಣುಮೂರ್ತಿ ತಂಡದ ಮಾಲಕ ಡಾಕ್ಟರ್ ಸುರೇಶ್ ಪುತ್ತೂರಾಯ, ಹೊಸ ಮನೆ ಕ್ರಿಕೆಟರ್ಸ್ ತಂಡದ ಮಾಲಕ ಗಂಗಾಧರ್, ಅಮೀನ್ ಹೊಸಮನೆ, ಶ್ರೀ ದತ್ತ್ ಕ್ರಿಕೆಟರ್ಸ್ ತಂಡದ ಮಾಲಕ ನಿತಿನ್ ಪಕ್ಕಳ, ಟೀಮ್ ರತ್ನಶ್ರೀ ಇದರ ಮಾಲಕ ಜಯಂತ ಶೆಟ್ಟಿ ಕಂಬಳದಡ್ಡ, ಸೆವೆನ್ ಡೈಮಂಡ್ಸ್ ಅಂಡ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಮಾಲಕ ಶರತ್ ಆಳ್ವ, ಆರ್ಯನ್ ಮೊಂನ್ ಸ್ಟರ್ ಮೇರ್ಲ ಮಾಲಕ ಸಂತೋಷ್ ಸುವರ್ಣ ಮೇರ್ಲ, ಸ್ವರ್ಣ ಸ್ಟ್ರೈಕರ್ಸ್ ಮಾಲಕ ಸುರೇಶ್ ಪೆಲತ್ತಡಿ, ಮರಕ್ಕ ಚಾಲೆಂಜರ್ಸ್ನ ಮಾಲಕ ನರೇಂದ್ರ ನಾಯಕ್, ಮರಕ್ಕ,ಟೀಮ್ ಕಾರ್ಪಾಡಿ ಮಾಲಕ ಬಾಲಚಂದ್ರ ಗೌಡ, ಟೀಮ್ ಎಸ್ ಕೆ ಸಿ ಪುತ್ತೂರು ಮಾಲಕ ಪ್ರೀತಮ್ ಶೆಟ್ಟಿ ಮೇರ್ಲ ಹಾಗೂ ತಂಡಗಳ ಐಕಾನ್ ಆಟಗಾರರು, ಹಲವು ಗಣ್ಯರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಹೊಸಮನೆ ಕ್ರಿಕೆಟರ್ಸ್ ನ ಕಾರ್ಯದಶಿಗಳಾದ ಪವನ್ ಶೆಟ್ಟಿ ವಂದಿಸಿ, ಕಾರ್ಯಕ್ರಮವನ್ನು ಶ್ರೇಯಸ್ ಶೆಟ್ಟಿ ನಿರೂಪಿಸಿದರು.