ಪುತ್ತೂರು : ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಮಹಿಳೆಯೊಂದಿಗೆ ಕಾಮುಕ ವ್ಯಕ್ತಿಯೋರ್ವ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜದಲ್ಲಿ ನಡೆದಿದೆ.
ಅಸಭ್ಯ ವರ್ತನೆ ತೋರಿದ ವ್ಯಕ್ತಿ ಬಶೀರ್ ಎಂದು ಪತ್ತೆ ಹಚ್ಚಲಾಗಿದೆ.
ಕಾಮುಕ ಬಶೀರ್ ಮಹಿಳೆಯನ್ನು ತಾಗಿಕೊಂಡು ಹೋಗಿದ್ದು, ನಂತರ ಆಕೆಯನ್ನು ಮನೆ ತನಕ ಹಿಂಬಾಲಿಸಿದ್ದಾನೆ. ಬಳಿಕ ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ನಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ವೇಳೆ ಮಹಿಳೆಯು ಗಾಬರಿಗೊಂಡು ಜೋರಾಗಿ ಬೊಬ್ಬೆ ಹಾಕಿದ್ದಾಳೆ. ಕಿರುಚಿದ ಶಬ್ದಕ್ಕೆ ಅಕ್ಕಪಕ್ಕದ ಮನೆಯವರು ಆಗಮಿಸಿ, ಕಾಮುಕ ಬಶೀರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಪೋಲಿಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಠಾಣೆಗೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ.
ಕಾಮುಕ ಬಶೀರ್ ಈ ಮೊದಲು ಕೂಡ ಹೋಗೋ ಬರೋ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಮಾಹಿತಿ ಲಭಿಸಿದೆ.