ಪುತ್ತೂರು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ್ದಾರೆ.
ಸಹಕಾರ ಭಾರತಿಯಿಂದ ಸ್ಪರ್ಧೆಗಿಳಿದಿದ್ದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ನನ್ಯ ಅಚ್ಚುತ ಮೂಡೆತ್ತಾಯ, ಮಂಜುನಾಥ ರೈ ಸಾಂತ್ಯ, ಶಿವರಾಮ ಪಿ ಈಶ್ವರಮಂಗಲ, ನಹುಷ ಭಟ್ ಪಳನೀರು, ನವೀನ ನನ್ನಪಟ್ನಾಜೆ, ಸಾಲಗಾರ ಮಹಿಳಾ ಸ್ಥಾನದಿಂದ ತಾರಾ ಸಂಕಪ್ಪ ಪೂಜಾರಿ ಚಾಕೋಟೆ, ಮೋಹನಾಂಗಿ ಬೀಜಂತ್ತಡ, ಹಿಂದುಳಿದ ವರ್ಗ ಬಿ ಯಿಂದ ಲೋಕೇಶ್ ಚಾಕೋಟೆ, ಹಿಂದುಳಿದ ವರ್ಗ ಎ ಯಿಂದ ರಮೇಶ್ ಪೂಜಾರಿ ಮುಂಡ್ಯ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ರಾಮಣ್ಣ ನಾಯ್ಕ ಕುದ್ರೋಳಿ, ಪರಿಶಿಷ್ಟ ಜಾತಿ ಸ್ನಾನದಿಂದ ಲೋಹಿತ್ ಅಮ್ಮಿನಡ್ಕ, ಸಾಲಗಾರರಲ್ಲದ ಸ್ಥಾನದಿಂದ ಪ್ರಪುಲ್ಲಾ ರೈ ಕರ್ನೂರುರವರು ಭರ್ಜರಿ ಜಯಗಳಿಸಿದ್ದಾರೆ.
ಸ್ಪರ್ಧಾಕಣದಲ್ಲಿದ್ದ ಕಾಂಗ್ರೆಸ್ ಬೆಂಬಲಿತರು ಮತ್ತು ರೈತಬಂಧು ಸಹಕಾರ ವೇದಿಕೆಯ ಎಲ್ಲಾ ಅಭ್ಯರ್ಥಿಗಳು ಸೋಲು ಕಂಡರು.